ಹಾಸನ: ಹಾಸನ ಜಿಲ್ಲೆಯ ಜನ ಇಲ್ಲಿಯವರೆಗೆ ಮಾನದಂಡವನ್ನು ನೋಡದೇ ಕುಟುಂಬ ರಾಜಕಾರಣಕ್ಕೆ ತಾವು ಜೀತ ಪದ್ಧತಿಯಂತೆ ದುಡಿಯುತ್ತಿದ್ದೀರಿ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಹಾಸನದಿಂದಲೂ ಮೋದಿಗೆ ಈ ಬಾರಿ ಒಂದು ಕಮಲ ಕೊಡುಗೆ: ಸೂಲಿಬೆಲೆ ವಿಶ್ವಾಸ - undefined
ಈ ಬಾರಿ ಹಾಸನ ಜಿಲ್ಲೆ ಜನರು ಕೂಡ ಬದಲಾವಣೆ ಬಯಸಿದ್ದಾರೆ. ಮೋದಿ ಸರ್ಕಾರಕ್ಕೆ ಹಾಸನದಿಂದಲೂ ಒಂದು ಕಮಲವನ್ನು ಕೊಡುಗೆ ನೀಡಲಿದ್ದಾರೆ ಎಂಬ ಭರವಸೆಯನ್ನು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವ್ಯಕ್ತಪಡಿಸಿದರು.
![ಹಾಸನದಿಂದಲೂ ಮೋದಿಗೆ ಈ ಬಾರಿ ಒಂದು ಕಮಲ ಕೊಡುಗೆ: ಸೂಲಿಬೆಲೆ ವಿಶ್ವಾಸ](https://etvbharatimages.akamaized.net/etvbharat/images/768-512-2956087-thumbnail-3x2-sulibele.jpg)
ಪಟ್ಟಣದ ಬಸವರಾಜೇಂದ್ರ ಶಾಲಾ ಆವರಣದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು, ಅಪ್ಪ ರಾಜ ಅನ್ನೋ ಕಾರಣಕ್ಕೆ ಅವನ ಮಗನನ್ನೇ ರಾಜನನ್ನಾಗಿ ಮಾಡುವ ರಾಜ ಪರಂಪರೆ ದೇಶದಲ್ಲಿ ಕಿತ್ತುಹಾಕಿ, ಪ್ರಜಾಪ್ರಭುತ್ವವವನ್ನು ಹಲವು ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿದೆ. ಆದ್ರೆ ಹಾಸನದಲ್ಲಿ ಯಾಕೋ ಆ ಪದ್ಧತಿಯನ್ನು ಬದಲಾಯಿಸಲು ಜನರು ನಿರ್ಧಾರ ಮಾಡುತ್ತಿಲ್ಲ. ಆದರೆ ಈ ಬಾರಿ ಖಂಡಿತ ಬದಲಾವಣೆ ಬಯಸಿದ್ದಾರೆ. ಮೋದಿ ಸರ್ಕಾರಕ್ಕೆ ಹಾಸನದಿಂದಲೂ ಒಂದು ಕಮಲವನ್ನು ಇಲ್ಲಿನ ಮತದಾರರು ಕೊಡುಗೆ ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದರು.
ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 5 ವರ್ಷಗಳ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಚಕ್ರವರ್ತಿ ಸೂಲಿಬೆಲೆ ಅವರು, ಏತಕ್ಕಾಗಿ ನಾವು ಮೋದಿ ಪರವಾಗಿ ಮತಚಲಾಯಿಸಬೇಕು ಎಂಬುದನ್ನು ವಿಶ್ಲೇಷಣೆ ಸಹಿತ ವಿವರಿಸಿದರು. ನೆರೆದಿದ್ದ ಸುಮಾರು 2000 ಕ್ಕೂ ಹೆಚ್ಚು ಜನರಿಂದ ಘೋಷಣೆಗಳನ್ನು ಕೂಗಿಸಿದರು.