ಹಾಸನ: ಜಿಲ್ಲೆಯಲ್ಲಿಂದು 25 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.
ಹಾಸನದಲ್ಲಿಂದು 25 ಜನರಿಗೆ ಸೋಂಕು: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಸ್ಪಷ್ಟನೆ!
ಹಾಸನ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇಂದು ಮತ್ತೆ 25 ಜನರಿಗೆ ಸೋಂಕು ತಗುಲಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಇದುವರೆಗೂ 711 ಪ್ರಕರಣ ವರದಿಯಾಗಿದ್ದು, 455 ಜನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 236 ಜನ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೇ ಇದುವರೆಗೂ 21 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
ತಾಲ್ಲೂಕುವಾರು ಕೋವಿಡ್ ಪ್ರಕರಣಗಳು:1. ಆಲೂರು - 31.2. ಅರಕಲಗೂಡು- 28.3. ಅರಸೀಕೆರೆ- 95.4. ಬೇಲೂರು -15.5. ಚನ್ನರಾಯಪಟ್ಟಣ- 243.6. ಹಾಸನ -199.7. ಹೊಳೆನರಸೀಪುರದಲ್ಲಿ- 84.8. ಸಕಲೇಶಪುರ- 11. 9. ಇತರ 5 ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಒಟ್ಟು 711 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.