ಹಾಸನ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಜಿಲ್ಲಾ ನ್ಯಾಯಾಲಯ ಸ್ಥಳಾಂತರ ಕಾರ್ಯ ಅತ್ಯಂತ ಶೀಘ್ರವಾಗಿ ನಡೆಯಲಿದೆ ಎಂದು ಜಿಲ್ಲಾ ಕಾನೂನು ಮತ್ತು ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಶೀರ್ಘವಾಗಿ ಹಾಸನ ಜಿಲ್ಲಾ ನ್ಯಾಯಾಲಯ ಸ್ಥಳಾಂತರಕ್ಕೆ ಕ್ರಮ.. ಉಸ್ತುವಾರಿ ಸಚಿವ ಮಾಧುಸ್ವಾಮಿ
ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಜಿಲ್ಲಾ ನ್ಯಾಯಾಲಯ ಸ್ಥಳಾಂತರ ಕಾರ್ಯ ಅತ್ಯಂತ ಶೀಘ್ರವಾಗಿ ನಡೆಯಲಿದೆ ಎಂದು ಜಿಲ್ಲಾ ಕಾನೂನು ಮತ್ತು ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ನಗರದ ವಕೀಲರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10 ದಿನಗಳಲ್ಲಿ ಹೊಸ ಬಸ್ ನಿಲ್ದಾಣದ ಎದುರು ಇರುವ ನೂತನ ಎಂಎಲ್ಎ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರಲ್ಲದೆ ಹೊಸ ಕಟ್ಟಡ ನ್ಯಾಯಾಲಯದ ಉದ್ಘಾಟನೆ ಆಗುವಲ್ಲಿ ಅಷ್ಟೊಂದು ನಿರಾಳವಾಗಿಲ್ಲ ಎಂದರು.
ಸಾರ್ವಜನಿಕರ ಹಾಗೂ ವಕೀಲರ ಅನುಕೂಲಕ್ಕೆ ಏನನ್ನು ಮಾಡಬೇಕೋ.. ಆ ಬಗ್ಗೆ ನನ್ನ ಕೈಲಾದುದನ್ನು ನಾನು ಮಾಡೇ ಮಾಡುತ್ತೇನೆ. ಆ ಕೆಲಸ ನಮಗೆ ಬಿಡಿ ಸ್ವಲ್ಪ ದಿನದಲ್ಲಿ ವಕೀಲರು ಕೋರಿಕೆ ಏನಿದೆ ನಿವಾರಿಸುವ ಕೆಲಸ ಮಾಡುವುದಾಗಿ ಹೇಳಿದರು. ಕಿರಿಯ ವಕೀಲರಿಗೆ ನೀಡುತ್ತಿರುವ ಶಿಷ್ಯವೇತನವನ್ನು 2 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸುವ ಕುರಿತಾಗಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.