ಕರ್ನಾಟಕ

karnataka

ETV Bharat / state

ಸ್ಕ್ಯಾನಿಂಗ್​, ರಕ್ತ ಪರೀಕ್ಷೆಗೆ ಖಾಸಗಿ ಆಸ್ಪತ್ರೆ ಶಿಫಾರಸು ಮಾಡ್ಬೇಡಿ: ಸರ್ಕಾರಿ ವೈದ್ಯರಿಗೆ ಖಡಕ್​ ಸೂಚನೆ - District Collector R. Girish

ಸರ್ಕಾರಿ  ಆಸ್ಪತ್ರೆಗಳಿಗೆ ಅಗತ್ಯ ಔಷಧ, ಮಾತ್ರೆಗಳು ಸರಬರಾಜು ಆಗಿದ್ದು, ವೈದ್ಯರು ಯಾವುದೇ ಕಾರಣಕ್ಕೂ ಹೊರಗೆ ಚೀಟಿ ಬರೆಯಬಾರದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ವೈದ್ಯರಿಗೆ ಸೂಚನೆ ನೀಡಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ: ಹೊರಗೆ ಚೀಟಿ ಬರೆಯದಂತೆ ವೈದ್ಯರಿಗೆ ಸೂಚನೆ.

By

Published : Oct 12, 2019, 10:36 AM IST

ಹಾಸನ: ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧ, ಮಾತ್ರೆಗಳು ಸರಬರಾಜು ಆಗಿದ್ದು, ವೈದ್ಯರು ಯಾವುದೇ ಕಾರಣಕ್ಕೂ ಹೊರಗೆ ಚೀಟಿ ಬರೆಯಬಾರದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ವೈದ್ಯರಿಗೆ ಸೂಚನೆ ನೀಡಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ: ಹೊರಗೆ ಚೀಟಿ ಬರೆಯದಂತೆ ವೈದ್ಯರಿಗೆ ಸೂಚನೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದಿದೆ. ಈ ಸಲುವಾಗಿ ಆಸ್ಪತ್ರೆಗೆ ಬರುವ ರೋಗಿಗಳನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಗುಣ ಮುಖಗೊಳಿಸಬೇಕು. ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯತೆ ವಹಿಸಬಾರದು. ಡೆಂಗ್ಯೂ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಮಾಡಬೇಕು. ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇಲ್ಲಿನ ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ. ಕೇಳಿದರ ವೈದ್ಯರು, ತಜ್ಞರು ಇಲ್ಲ ಎಂದು ಕಳೆದ 2 ವರ್ಷಗಳಿಂದ ಹೇಳುತ್ತಿದ್ದರೆ, ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಕೂಡಲೆ ಸ್ಕ್ಯಾನಿಂಗ್ ಯಂತ್ರ ಕಾರ್ಯನಿರ್ವಹಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ತುರ್ತುನಿಗಾ ಘಟಕ ಸಹ ಕಾರ್ಯಾರಂಭಗೊಳಿಸಲು ಗಮನಹರಿಸಲಾಗುವುದು ಎಂದರು.

ತಜ್ಞ ವೈದ್ಯರುಗಳ ಕಾರ್ಯನಿರ್ವಹಣೆ, ಒಳರೋಗಿ ವಿಭಾಗ, ಹೊರರೋಗಿಗಳ ವಿಭಾಗ, ಡಯಾಲಿಸ್ ಕೇಂದ್ರ, ತುರ್ತು ಚಿಕಿತ್ಸಾ ವಾರ್ಡ್, ಹೆರಿಗೆ ವಿಭಾಗ,ವಾರ್ಡ್, ಸಾಮಾನ್ಯ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯಾಧಿಕಾರಿ ಡಾ.ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ.ಸ್ವಾಮೀಗೌಡ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಷ್ಪ, ರಕ್ಷಾ ಸಮಿತಿ ಸದಸ್ಯ ರವಿಕುಮಾರ್, ತಾಪಂ ಸದಸ್ಯ ವೀರಾಜ್, ದಸಂಸ ಮುಖಂಡ ಗಣೇಶ್‌ ವೇಲಾಪುರಿ ಹಾಗೂ ಇತರೆ ವೈದ್ಯರು, ಸಿಬ್ಬಂದಿ ಹಾಜರಿದ್ದರು.

ABOUT THE AUTHOR

...view details