ಹಾಸನ:ಅಲ್ಪ ಸಂಖ್ಯಾತ ವರ್ಗದವರು ಎಂಬ ಕಾರಣಕ್ಕೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ಅಕ್ರಂಪಾಷ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ಮಖಂಡ ಎಚ್. ಕೆ. ಮಹೇಶ್, ಈ ಕೂಡಲೇ ಅವರನ್ನು ಮತ್ತೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ವರ್ಗಾವಣೆಗೆ ಖಂಡನೆ: ಮರುವರ್ಗಾವಣೆಗೆ ಆಗ್ರಹ - ಜಿಲ್ಲಾಧಿಕಾರಿ ಅಕ್ರಂಪಾಷ
ಜಿಲ್ಲಾಧಿಕಾರಿ ಅಕ್ರಂಪಾಷ ಜವಾಬ್ದಾರಿಯುತವಾಗಿ, ಒಬ್ಬ ಗ್ರಾಮ ಲೆಕ್ಕಾಧಿಕಾರಿ ಮಾಡುವ ಕೆಲಸವನ್ನೂ ಕೂಡ ಮಾಡಿದ್ದಾರೆ. ಅಂತಹ ಅಧಿಕಾರಿಯನ್ನು ಬಿಜೆಪಿಯವರು ಮುಸ್ಲಿಂ ಎಂಬ ಉದ್ದೇಶಕ್ಕೆ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಹೇಳಿದ್ದಾರೆ.
ಮರುವರ್ಗಾವಣೆಗೆ ಆಗ್ರಹಿಸಲಾಯಿತು.
ಜಿಲ್ಲಾಧಿಕಾರಿ ಅಕ್ರಂಪಾಷಾ ಜವಾಬ್ದಾರಿಯುತವಾಗಿ, ಒಬ್ಬ ಗ್ರಾಮ ಲೆಕ್ಕಾಧಿಕಾರಿ ಮಾಡುವ ಕೆಲಸವನ್ನೂ ಕೂಡ ಮಾಡಿದ್ದಾರೆ. ಅಂತಹ ಅಧಿಕಾರಿಯನ್ನು ಬಿಜೆಪಿಯವರು ಮುಸ್ಲಿಂ ಎಂಬ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಹಿಂದೆ ಇದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿದ ಕೂಡಲೇ ಬಿಜೆಪಿಯವರು ಬಾವುಟ ಹಿಡಿದು ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದರು. ಜಿಲ್ಲೆಗೆ ಅತಿವೃಷ್ಠಿ ಬಗ್ಗೆ ಅಧ್ಯಯನ ನಡೆಸಲು ಬಂದತಹ ಬಿಜೆಪಿ ನಿಯೋಗವು ಕೂಡ ಅಕ್ರಂಪಾಷ ಅವರನ್ನು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ.