ಕರ್ನಾಟಕ

karnataka

ETV Bharat / state

ಹಾಸನಾಂಬ ದರ್ಶನಕ್ಕೆ ತೆರೆ.. ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಿದ ಜಿಲ್ಲಾಡಳಿತ - Hasanamba Temple door closed

ನವೆಂಬರ್ 5 ರಂದು ಪ್ರಾರಂಭವಾದ ಹಾಸನಾಂಬ ದೇವಿಯ ದರ್ಶನ ಇಂದು ಕೊನೆಗೊಂಡಿದ್ದು, ಶಾಸಕರು, ಸಚಿವರ ಸಮ್ಮುಖದಲ್ಲಿ ಅಧಿಕಾರಿಗಳು ದೇವಸ್ಥಾನದ ಬಾಗಿಲು ಮುಚ್ಚಿದರು..

District administration closed the door of Hasanamba Temple
ಹಾಸನಾಂಬ ದರ್ಶನಕ್ಕೆ ತೆರೆ

By

Published : Nov 16, 2020, 5:42 PM IST

ಹಾಸನ : ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮಧ್ಯಾಹ್ನ 1 ಗಂಟೆ 30 ನಿಮಿಷಕ್ಕೆ ಸರಿಯಾಗಿ ಮುಚ್ಚಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಗಿರೀಶ್, ಎಸಿ ಜಗದೀಶ್ ಹಾಗೂ ತಹಶೀಲ್ದಾರ್ ಶಿವಶಂಕರಪ್ಪ ಎದುರು ದೇವಾಲಯದ ಬಾಗಿಲು ಮುಚ್ಚಲಾಯಿತು. ಪ್ರತಿ ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.

ಈ ಬಾರಿ ನವೆಂಬರ್ 5ರಂದು ದೇವಾಲಯದ ಬಾಗಿಲು ತೆರೆಯಲಾಗಿತ್ತು. ಇಂದು ಬಲಿಪಾಡ್ಯಮಿ ದಿನವಾದ್ದರಿಂದ ವಿಶ್ವರೂಪ ದರ್ಶನದ ಬಳಿಕ ದೇವಾಲಯದ ಬಾಗಿಲು ಮುಚ್ಚಲಾಯಿತು. ಈ ಬಾರಿ ಕೊರೊನಾ ಹಿನ್ನೆಲೆ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರಲಿಲ್ಲ.

ಹಾಸನಾಂಬ ದರ್ಶನಕ್ಕೆ ತೆರೆ

ದೇವಾಲಯದ ಬಾಗಿಲು ಮುಚ್ಚಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಜಿಲ್ಲಾಡಳಿತದ ಅಧಿಕಾರಿಗಳ ಮುಂಭಾಗ ಇಂದು ಬಾಗಿಲು ಮುಚ್ಚಲಾಗಿದೆ ಎಂದು ತಿಳಿಸಿದರು.

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಹಾಸನಾಂಬ ದರ್ಶನ ಯಶಸ್ವಿಯಾಗಿ ನಡೆದಿದೆ. ಮುಂದಿನ ವರ್ಷ ಅದ್ಧೂರಿಯಾಗಿ ಯಾವ ಗೊಂದಲವಿಲ್ಲದೆ ದೇವಾಲಯದ ಬಾಗಿಲು ತೆಗೆದು ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ABOUT THE AUTHOR

...view details