ಕರ್ನಾಟಕ

karnataka

ETV Bharat / state

ಹಾಸನ ಜೆಡಿಎಸ್ ಮುಖಂಡರಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ: ಜನರಿಂದ ನೂಕುನುಗ್ಗಲು - ಜೆಡಿಎಸ್ ಮುಖಂಡ  ಅಗಿಲೆ ಯೋಗೀಶ್

ಸಾಮಾಜಿಕ ಅಂತರ ಕಾಪಾಡದೇ ನೂಕುನುಗ್ಗಲಿನಲ್ಲಿ ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿರುವ ಘಟನೆ ನಗರದಲ್ಲಿ ನಡೆದಿದೆ.

Distribution of food kit by Hassan JDS leaders
ಹಾಸನ ಜೆಡಿಎಸ್ ಮುಖಂಡರಿಂದ ಆಹಾರದ ಕಿಟ್ ವಿತರಣೆ, ನೂಕು-ನುಗ್ಗಲಿನಲ್ಲಿ ಬಂದ ಜನ..!

By

Published : Apr 18, 2020, 9:09 PM IST

ಹಾಸನ: ಸಾಮಾಜಿಕ ಅಂತರ ಕಾಪಾಡದೇ ನೂಕುನುಗ್ಗಲಿನಲ್ಲಿ ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಹಾಸನಾಂಬ ದೇವಸ್ಥಾನದ ರಸ್ತೆ ಬಳಿ ಇರುವ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಜೆಡಿಎಸ್ ಪಕ್ಷದ ಮುಖಂಡ ಅಗಿಲೆ ಯೋಗೀಶ್, ಜಿಪಂ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಮಾಜಿ ಸದಸ್ಯ ಹೆಚ್.ಬಿ.ಗೋಪಾಲ್ ಹಾಗೂ ಇತರರು ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದಾರೆ.

ಆದರೆ ಕೊರೊನಾ ಹರಡಬಾರದು ಎಂದು ಸಾಮಾಜಿಕ ಅಂತರ ಕಾಪಾಡಲು ಅಷ್ಟೆಲ್ಲಾ ಪ್ರಚಾರ ಮಾಡುತ್ತಿದ್ದರೂ ತಮಗೆ ಏನೂ ತಿಳಿದಿಲ್ಲ ಎಂಬ ರೀತಿ ಸಾರ್ವಜನಿಕರು ಕಿಟ್ ಪಡೆಯುತ್ತಿದ್ದರು. ಕಿಟ್ ವಿತರಣೆ ಮಾಡುವ ಆಯೋಜಕರು ಕೂಡ ಅಂತರದಲ್ಲಿ ಬರುವಂತೆ ಮನವಿ ಮಾಡುತ್ತಿದ್ದರೂ ಸಾರ್ವಜನಿಕರು ಪಾಲಿಸಲಿಲ್ಲ.

ABOUT THE AUTHOR

...view details