ಸಕಲೇಶಪುರ :ಕೋವಿಡ್-19 ಹಿನ್ನೆಲೆಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಬಿಸಿಯೂಟದ ಬದಲು ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ಶೇ.30ರಷ್ಟು ಗುರಿ ಸಾಧಿಸಲಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್ ಹೇಳಿದರು.
ಶಾಲಾ ಮಕ್ಕಳಿಗೆ ಆಹಾರ ಪದಾರ್ಥಗಳ ವಿತರಣೆ - Distribution of food items to school children
ಪಟ್ಟಣದ ಕೆಲವು ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥಗಳನ್ನು ನೀಡಿದ ನಂತರ ಮಾತನಾಡಿ, ಸರ್ಕಾರದ ಆದೇಶದಂತೆ ಬೇಸಿಗೆ ಅವಧಿಯ 37 ದಿನಗಳ ಕಾಲದ ಅಕ್ಕಿ, ಬೇಳೆ ಹಾಗೂ ಹಾಲಿನ ಪುಡಿ ವಿತರಣೆ ಮಾಡಲಾಗುತ್ತಿದೆ..
ಶಾಲಾ ಮಕ್ಕಳಿಗೆ ಆಹಾರ ಪದಾರ್ಥಗಳ ವಿತರಣೆ
ಪಟ್ಟಣದ ಕೆಲವು ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥಗಳನ್ನು ನೀಡಿದ ನಂತರ ಮಾತನಾಡಿ, ಸರ್ಕಾರದ ಆದೇಶದಂತೆ ಬೇಸಿಗೆ ಅವಧಿಯ 37 ದಿನಗಳ ಕಾಲದ ಅಕ್ಕಿ, ಬೇಳೆ ಹಾಗೂ ಹಾಲಿನ ಪುಡಿ ವಿತರಣೆ ಮಾಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಸುಮಾರು 7,653 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದ ಪ್ರಯೋಜನ ಪಡೆಯುತ್ತಿದ್ದು, 3 ಕೆಜಿ 900 ಗ್ರಾಂನಷ್ಟು ಅಕ್ಕಿ ಜೊತೆಗೆ 600 ಗ್ರಾಂ. ಬೇಳೆ ಹಾಗೂ 500 ಗ್ರಾಂ. ಹಾಲಿನ ಪುಡಿ ನೀಡಲಾಗುತ್ತಿದೆ. ಅಕ್ಕಿ ಹಾಗೂ ಬೇಳೆ ಸಂಪೂರ್ಣವಾಗಿ ಬರದಿರುವುದಿರಂದ ಎಲ್ಲರಿಗೂ ಪದಾರ್ಥಗಳನ್ನು ತಲುಪಿಸುವುದು ತುಸು ವಿಳಂಬವಾಗುತ್ತಿದೆ ಎಂದರು.