ಕರ್ನಾಟಕ

karnataka

ETV Bharat / state

ಇನ್ನೂ ಸಚಿವ ಸಂಪುಟ ರಚನೆಯ ಲಕ್ಷಣಗಳು ಕಾಣುತ್ತಿಲ್ಲ.. ದಿನೇಶ್‌ ಗುಂಡೂರಾವ್​​.. - Dinesh Gundurao did survey

ಸಚಿವ ಸಂಪುಟ ರಚನೆಯಾಗದೇ ಇರುವುದರಿಂದ ಮುಖ್ಯಮಂತ್ರಿಗಳೇ ಸೂಪರ್ ಮ್ಯಾನ್ ರೀತಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಓಡಾಡುತ್ತಿದ್ದಾರೆ. ಸಂಪುಟ ರಚನೆಯಾಗಿದ್ದರೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಆಯಾ ಮಂತ್ರಿಗಳು ಭೇಟಿ ನೀಡಿ ಪರಿಹಾರ ಕಾರ್ಯಗಳು ನಡೆಯುತ್ತಿದ್ದವು ಎಂದು ದಿನೇಶ್​​​ ಗುಂಡೂರಾವ್​ ಪ್ರತಿಕ್ರಿಯೆ ನೀಡಿದರು.

ದಿನೇಶ್​ ಗುಂಡೂರಾವ್​​

By

Published : Aug 17, 2019, 9:05 PM IST

ಹಾಸನ: ಮಧ್ಯಂತರ ಚುನಾವಣೆ ಬಂದಿದ್ರೆ ಮೋದಿ ಮತ್ತು ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಅಂತಾ ಭಾಷಣದ ಮೇಲೆ ಭಾಷಣ ಮಾಡಿ ಹೋಗ್ತಿದ್ದರು. ಆದರೆ, ಇವತ್ತು ಲಕ್ಷಾಂತರ ಮಂದಿ ಪ್ರವಾಹಕ್ಕೆ ಸಿಲುಕಿ ರಾಜ್ಯದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರಿಸದಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.

ಬಿಜೆಪಿಗೆ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲ.. ದಿನೇಶ್​ ಗುಂಡೂರಾವ್​​

ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗುಂಡೂರಾವ್​​, ಪ್ರವಾಹದಿಂದ ಮೃತಪಟ್ಟ ಸಕಲೇಶಪುರದ ಪ್ರಕಾಶ್ ಮತ್ತು ರಮೇಶ್ ಕುಟುಂಬಕ್ಕೆ ಸಾಂತ್ವನ ಹೇಳಿ ತಲಾ 50 ಸಾವಿರ ರೂ. ಆರ್ಥಿಕ ಸಹಾಯ ಮಾಡಿದರು.

ಈಗಾಗಲೇ ಜಿಲ್ಲೆಯಲ್ಲಿ ಸುಮಾರು 300 ಕೋಟಿಯಷ್ಟು ಹಾನಿ ಸಂಭವಿಸಿದ್ದು, ಶೀಘ್ರವಾಗಿ ಪರಿಹಾರ ಕಾರ್ಯ ಚುರುಕುಗೊಳಿಸಬೇಕು. ರಾಜ್ಯದಲ್ಲಿ ಸಂಭವಿಸಿರುವ ಹಾನಿಗೆ ರಾಜ್ಯ ಸರ್ಕಾರವೇ ಎಲ್ಲಾ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ತಕ್ಷಣ 5-10 ಸಾವಿರ ಕೋಟಿ ಬಿಡುಗಡೆ ಮಾಡಿ ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕು ಅಂತಾ ಒತ್ತಾಯಿಸಿದರು.

ಈಗಾಗಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಇಬ್ಬರೂ ವೈಮಾನಿಕ ಸಮೀಕ್ಷೆ ನಡೆಸಿದರೂ ಕೂಡ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ ಎಂದರು. ಸಮನ್ವಯ ಸಾಧಿಸಿ ತಕ್ಷಣ ಸಭೆ ಕರೆದು ಒಮ್ಮತದ ತೀರ್ಮಾನವನ್ನು ಪಡೆದುಕೊಂಡು ಎಲ್ಲರನ್ನೂ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಕೆಲಸ ಮಾಡಲಿ ಅಂತಾ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದರು.

ಸಚಿವ ಸಂಪುಟ ರಚನೆಯಾಗದೇ ಇರುವುದರಿಂದ ಮುಖ್ಯಮಂತ್ರಿಗಳೇ ಸೂಪರ್ ಮ್ಯಾನ್ ರೀತಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಓಡಾಡುತ್ತಿದ್ದಾರೆ. ಸಂಪುಟ ರಚನೆಯಾಗಿದ್ದರೆ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಆಯಾ ಮಂತ್ರಿಗಳು ಭೇಟಿ ನೀಡಿ ಪರಿಹಾರ ಕಾರ್ಯಗಳು ನಡೆಯುತ್ತಿದ್ದವು. ಆದರೆ, ಇನ್ನೂ ಕೂಡ ಸಚಿವ ಸಂಪುಟ ರಚನೆ ಆಗುವ ಲಕ್ಷಣಗಳು ಕಾಣುತ್ತಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details