ಕರ್ನಾಟಕ

karnataka

ಪತ್ನಿ ಸಮೇತ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದ ದೇವೇಗೌಡರು

ದೀಪಾವಳಿಯ ದಿನದಂದು ದೇವಾಲಯದಲ್ಲಿ ದೀಪ ಹಚ್ಚಿ ಬಾಗಿಲು ಹಾಕಲಾಗುತ್ತದೆ. ಒಂದು ವರ್ಷವಾದರೂ ದೇವಿಯ ದೀಪ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ..

By

Published : Nov 6, 2020, 7:27 PM IST

Published : Nov 6, 2020, 7:27 PM IST

Deve Gowda, who had came to with his  wife to warship Hasanamba
ಪತ್ನಿ ಸಮೇತರಾಗಿ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದ ದೇವೇಗೌಡರು

ಹಾಸನ: ಇಲ್ಲಿನ ಹಾಸನಾಂಬ ದೇವಾಲಯಕ್ಕೆ ಪತ್ನಿ ಜತೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು, ದೇವಿಯ ದರ್ಶನ ಪಡೆದಿದ್ದಾರೆ.

ಬಳಿಕ ಮಾತನಾಡಿದ ಅವರು, ಜಿಲ್ಲಾಡಳಿತ ಕೊರೊನಾದ ನಡುವೆಯೂ ಈ ಆಚರಣೆ ಮುಂದುವರಿಸಿದ್ದಾರೆ. ಕಳೆದ ವರ್ಷ ಲಕ್ಷಾಂತರ ಜನ ದೇವಿಯ ದರ್ಶನಕ್ಕೆ ಬರುತ್ತಿದ್ದರು. ಆದರೆ, ಕೊರೊನಾದಿಂದ ಈ ಬಾರಿ ಕಡಿಮೆಯಾಗಿದೆ ಎಂದರು.

ದೀಪಾವಳಿಯ ದಿನದಂದು ದೇವಾಲಯದಲ್ಲಿ ದೀಪ ಹಚ್ಚಿ ಬಾಗಿಲು ಹಾಕಲಾಗುತ್ತದೆ. ಒಂದು ವರ್ಷವಾದರೂ ದೇವಿಯ ದೀಪ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ. ಜನಸಾಮಾನ್ಯರೂ ದೇವಿಯ ಬಗ್ಗೆ ನಂಬಿಕೆ ವಿಶ್ವಾಸವಿದೆ.

ಈ ಬಾರಿ ಜಿಲ್ಲಾಡಳಿತ ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದಾರೆ. ನಾನು ಹಾಸನ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಲ್ಲರಿಗೂ ಹಾಸನಾಂಬೆ ಆರೋಗ್ಯ, ಆಯುಷ್ಯ ನೀಡಲಿ ಎಂದು ಬೇಡಿದ್ದೇನೆ. ಕೊನೆಗಾಲದಲ್ಲಿ ರಾಜ್ಯಸಭಾ ಸದಸ್ಯನಾಗಿದ್ದೇನೆ. ನನ್ನ ಕೈಲಾದಷ್ಟು ಜನರ‌ ಕೆಲಸ ಮಾಡುತ್ತೇನೆ ಎಂದರು.

ABOUT THE AUTHOR

...view details