ಕರ್ನಾಟಕ

karnataka

ETV Bharat / state

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಬಜರಂಗದಳ ಒತ್ತಾಯ - ವಿಶ್ವ ಹಿಂದು ಪರಿಷದ್-ಭಜರಂಗದಳ

ಮಂಗಳವಾರ ರಾತ್ರಿ ರಾಜಧಾನಿಯ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ದೊಂಬಿ, ಬೆಂಕಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಅಮಾಯಕರಿಗೆ ತೊಂದರೆ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧ್ವಂಸಕ್ಕೆ ಯತ್ನಿಸಿದ ಕೃತ್ಯಗಳನ್ನು ಬಜರಂಗದಳ ಖಂಡಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

KG Halli and D.J. Halli incident
ಬಜರಂಗದಳ ಒತ್ತಾಯ

By

Published : Aug 13, 2020, 6:56 PM IST

ಹಾಸನ:ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಕಾರಣಕರ್ತರಾದವರ ಮೇಲೆ ಕ್ರಮ ಕೈಗೊಂಡು, ಪ್ರಕರಣವನ್ನು ಎನ್.ಐ.ಎ. ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್-ಭಜರಂಗದಳದಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

2020 ಆಗಸ್ಟ್ 11ರ ಮಂಗಳವಾರ ರಾತ್ರಿ ರಾಜಧಾನಿಯ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ದೊಂಬಿ, ಬೆಂಕಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಅಮಾಯಕರಿಗೆ ತೊಂದರೆ, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧ್ವಂಸಗೊಳಿಸಲು ಯತ್ನಿಸಿದ ಕೃತ್ಯಗಳನ್ನು ಬಜರಂಗದಳ ಉಗ್ರವಾಗಿ ಖಂಡಿಸುವುದಾಗಿ ಹೇಳಿದೆ.

ಇದು ಪೂರ್ವಯೋಜಿತ ಕೃತ್ಯ. ಈ ಘಟನೆಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಸಮಾಜಕ್ಕೆ ಅಪಾರ ನಷ್ಟವಾದರೆ ಮತ್ತೊಂದು ಕಡೆ ಅಮಾಯಕರಿಗೆ ಶಿಕ್ಷೆ ಲಭಿಸಿದೆ ಎಂದು ಆತಂಕವ್ಯಕ್ತಪಡಿಸಿದ ಸಂಘಟನೆಯ ಸದಸ್ಯರು, ಘಟನೆಗೆ ಕಾರಣರಾಗಿರುವ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು. ಗಲಭೆಯ ಪ್ರಮುಖ ರೂವಾರಿಯೆಂದು ಬಿಂಬಿಸಲಾಗುತ್ತಿರುವ ಸ್ಥಳೀಯ ಕಾರ್ಪೊರೇಟರ್ ಮುಜಾಯಿಲ್ ಪಾಷಾ ಮತ್ತು ಇತರ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ, ವಿಚಾರಣೆಗೊಳಪಡಿಸಿ ಉಗ್ರವಾಗಿ ಶಿಕ್ಷೆ ದೊರೆಯುವಂತೆ ಮಾಡಿ. ಇಂತಹ ಘಟನೆಗಳು ಮತ್ತೆ ಪುನರಾವರ್ತಿತವಾಗದಂತೆ ನೋಡಿಕೊಳ್ಳಬೇಕು ಎಂದರು.

​​ಗಲಭೆಯನ್ನು ನಿಯಂತ್ರಿಸುವಲ್ಲಿ ನಡೆಸಿದ ಪೊಲೀಸ್ ಕಾರ್ಯಾಚರಣೆಯನ್ನು ಸಮರ್ಥಿಸಿ, ಪೊಲೀಸರಿಂದ ಹತ್ಯೆಯಾದ ಯಾರಿಗೂ ಪರಿಹಾರವನ್ನು ಕೊಡಬಾರದು. ಗಲಭೆಯಿಂದ ಸಂತ್ರಸ್ತರಾಗಿರುವ ಅಮಾಯಕ ಹಿಂದೂಗಳಿಗೆ ಪರಿಹಾರವನ್ನು ನೀಡಬೇಕು. ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರ ಮೇಲೆ ಆಗುತ್ತಿರುವ ಇಂತಹ ದುಷ್ಕೃತ್ಯಗಳು ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಹಾಗೂ ಕರ್ತವ್ಯ ನಿರತ ಪೊಲೀಸರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ABOUT THE AUTHOR

...view details