ಸಕಲೇಶಪುರ: ಪಟ್ಟಣದ ಪ್ರೇಮನಗರ ಬಡಾವಣೆಯಲ್ಲಿ ಕುಸಿಯುತ್ತಿರುವ ಧರೆಗೆ ತಡೆಗೋಡೆಯನ್ನು ಕೂಡಲೇ ನಿರ್ಮಿಸದಿದ್ದರೆ ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪುರಸಭೆ ಸದಸ್ಯ ಕಾಡಪ್ಪ ಎಚ್ಚರಿಕೆ ನೀಡಿದ್ದಾರೆ.
ಸಕಲೇಶಪುರ: ಕುಸಿಯುತ್ತಿರುವ ಧರೆಗೆ ತಡೆಗೋಡೆ ನಿರ್ಮಿಸಲು ಆಗ್ರಹ - ಪುರಸಭೆ ಸದಸ್ಯ ಕಾಡಪ್ಪ ಮನವಿ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರೇಮನಗರ ಬಡಾವಣೆಯ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಧರೆ ಕುಸಿಯುವ ಹಂತದಲ್ಲಿದೆ.
ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರೇಮನಗರ ಬಡಾವಣೆಯ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಧರೆ ಕುಸಿಯುವ ಹಂತದಲ್ಲಿದೆ. ಪ್ರತಿವರ್ಷವು ತಡೆಗೋಡೆ ನಿರ್ಮಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲ್ಭಾಗದಲ್ಲಿ ಕುಡಿಯುವ ನೀರಿನ ಸಿಸ್ಟನ್ ಹಾಗೂ ವಿದ್ಯುತ್ ಕಂಬವಿದ್ದು ಯಾವ ಕ್ಷಣದಲ್ಲಾದರೂ ಬೀಳುವ ಸಾಧ್ಯತೆಯಿದೆ. ಅಲ್ಲದೇ ಕೆಳಬಾಗದಲ್ಲಿ ಇರುವ ಮನೆಗಳ ಮೇಲೆ ಯಾವ ಕ್ಷಣದಲ್ಲಾದರೂ ವಿದ್ಯುತ್ ಕಂಬ ಬಿದ್ದು, ಪ್ರಾಣ ಹಾನಿ ಸಂಭವಿಸಬಹುದು.
ಆದ್ದರಿಂದ ಕೂಡಲೇ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತಡೆಗೋಡೆ ರಚಿಸಲು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.