ಹಾಸನ:ಗುಂಡೇಟು ಬಿದ್ದು ಜಿಂಕೆ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬಿಳಿಸಾರೆ ಗ್ರಾಮದಲ್ಲಿ ನಡೆದಿದೆ. ಕುತ್ತಿಗೆ ಭಾಗದಲ್ಲಿ ಗುಂಡೇಟಿನ ಗುರುತು ಕಂಡು ಬಂದಿದ್ದು, ಮಾಂಸಕ್ಕಾಗಿ ಬಹುಶಃ ಬೇಟೆಗಾರರು ನಡೆಸಿದ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಹಾಸನದಲ್ಲಿ ಗುಂಡೇಟಿಗೆ ಜಿಂಕೆ ಬಲಿ: ಬೇಟೆಗಾರರ ಕೃತ್ಯ ಶಂಕೆ - ಸಕಲೇಶಪುರ ತಾಲೂಕಿನ ಬಿಳಿಸಾರೆ ಜಿಂಕೆ ಸಾವು
ಗುಂಡೇಟು ಬಿದ್ದು ಜಿಂಕೆಯೊಂದು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬಿಳಿಸಾರೆ ಗ್ರಾಮದಲ್ಲಿ ನಡೆದಿದೆ.
![ಹಾಸನದಲ್ಲಿ ಗುಂಡೇಟಿಗೆ ಜಿಂಕೆ ಬಲಿ: ಬೇಟೆಗಾರರ ಕೃತ್ಯ ಶಂಕೆ](https://etvbharatimages.akamaized.net/etvbharat/prod-images/768-512-5140954-thumbnail-3x2-smk.jpg)
ಗುಂಡೇಟಿಗೆ ಜಿಂಕೆ ಬಲಿ..?
ಗುಂಡಿನಿಂದ ತೀವ್ರವಾಗಿ ಗಾಯಗೊಂಡ ಜಿಂಕೆ ಬಳಿಕ ಗ್ರಾಮದ ಬಳಿ ಬಂದು ಸಾವನ್ನಪ್ಪಿರಬಹುದು ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತಿಮ ಸಂಸ್ಕಾರ ಮಾಡಿದ್ದಾರೆ.