ಅರಕಲಗೂಡು:ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಹಲವಾರು ಎಂದು ಮಾಜಿ ಶಾಸಕ ಎ.ಮಂಜು ತಿಳಿಸಿದರು.
ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಐತಿಹಾಸಿಕ: ಎ.ಮಂಜು - ಮಾಜಿ ಶಾಸಕ ಎ.ಮಂಜು
ಪಟ್ಟಣದ ಕೋಟೆ ಭಾಗದಲ್ಲಿ ಮನೆಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆ ಕುರಿತಾದ ಭಿತ್ತಿ ಪತ್ರ ಹಂಚಿದ ಮಾಜಿ ಶಾಸಕ ಎ.ಮಂಜು ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಿದರು.
![ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಐತಿಹಾಸಿಕ: ಎ.ಮಂಜು A. Manju](https://etvbharatimages.akamaized.net/etvbharat/prod-images/768-512-7574845-358-7574845-1591878485081.jpg)
ಪಟ್ಟಣದ ಕೋಟೆ ಭಾಗದಲ್ಲಿ ಮನೆಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆ ಕುರಿತಾದ ಭಿತ್ತಿ ಪತ್ರ ಹಂಚಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಮೋದಿ ಸರ್ಕಾರ ತೆಗೆದುಕೊಂಡು ನಿರ್ಧಾರಗಳು ಐತಿಹಾಸಿಕ. ಉದಾಹರಣೆಗೆ ಆರ್ಟಿಕಲ್ 370, ಪೌರತ್ವ ತಿದ್ದುಪಡಿ ಕಾಯ್ದೆ, ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು, ಹಲವಾರು ಕಾರಿಡಾರ್ ಯೋಜನೆಗಳು ಹಾಗೂ ಕೆಲ ವಿದೇಶಿ ಒಪ್ಪಂದ ಸೇರಿದಂತೆ ಹತ್ತು ಹಲವಾರು ಜನಪರ ಕೆಲಸಗಳನ್ನು ಮಾಡಿದ್ದು, ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಮನೆಮನೆಗೆ ತೆರಳಿ ಭಿತ್ತಿ ಪತ್ರ ಹಂಚುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅರಕಲಗೂಡು ಮಂಡಲ ಅಧ್ಯಕ್ಷ ಮಂಜುನಾಥ್, ಬಿಜೆಪಿ ಮುಖಂಡರಾದ ಮುತ್ತಿಗೆ ರಮೇಶ್, ನಿರಂಜನ್, ಗಣೇಶ್ ಭಾಣದಹಳ್ಳಿ, ಜಬಿವುಲ್ಲ, ಮಂಜು, ಅಶೋಕ್, ಉದೇಶ್, ರವಿಕುಮಾರ್ ಇತರರು ಹಾಜರಿದ್ದರು.