ಕರ್ನಾಟಕ

karnataka

By

Published : Dec 20, 2019, 10:54 PM IST

ETV Bharat / state

ಬಿಸಿಯೂಟ ನೌಕರರಿಂದ ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಹೋರಾಟ: ಎಂ.ಬಿ. ಪುಷ್ಪ

ಅಕ್ಷರ ದಾಸೋಹ ಯೋಜನೆ ಖಾಸಗೀಕರಣ ವಿರೋಧಿಸಿ ಮತ್ತು ಕನಿಷ್ಠ ವೇತನಕ್ಕೆ ಒತ್ತಾಯಿಸಿ ಡಿ. 26 ರ ಗುರುವಾರ ಬಿಸಿಯೂಟ ನೌಕರರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟವಧಿ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ತಿಳಿಸಿದರು.

m-b-pushpa
ಎಂ.ಬಿ. ಪುಷ್ಪ

ಹಾಸನ:ಅಕ್ಷರ ದಾಸೋಹ ಯೋಜನೆ ಖಾಸಗೀಕರಣ ವಿರೋಧಿಸಿ ಮತ್ತು ಕನಿಷ್ಠ ವೇತನಕ್ಕೆ ಒತ್ತಾಯಿಸಿ ಡಿ. 26 ರ ಗುರುವಾರ ಬಿಸಿಯೂಟ ನೌಕರರಿಂದ ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ತಿಳಿಸಿದರು.

2012 ಭಾರತೀಯ ಕಾರ್ಮಿಕ ಸಮ್ಮೇಳನ ತಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ ನಿಗದಿ ಪಡಿಸಬೇಕೆಂದೂ ಹೇಳಿದೆ. 7 ನೇ ವೇತನ ಆಯೋಗ 18 ಸಾವಿರಕ್ಕಿಂತ ಕಡಿಮೆ ವೇತನಕ್ಕೆ ಯಾರನ್ನೂ ದುಡಿಸಬಾರದೆಂದು ಹೇಳಿದೆ. 1948 ಕನಿಷ್ಠ ವೇತನ ಕಾಯ್ದೆ ಕನಿಷ್ಠ ವೇತನಕ್ಕಿಂತ ಕಡಿಮೆ ಯಾರನ್ನು ದುಡಿಸಬಾರದೆಂದು ಹೇಳಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳು 21 ಸಾವಿರ ಕನಿಷ್ಠ ವೇತನ ನೀಡಬೇಕೆಂದು ಹೇಳಿವೆ ಎಂದು ಸುದ್ದಿಗೋಷ್ಟಿಯಲ್ಲಿ ಅವರು ವಿವರಿಸಿದರು.

ಎಂ.ಬಿ. ಪುಷ್ಪ

ಕೇಂದ್ರ ಸರ್ಕಾರವು ಬಿಸಿಯೂಟ ನೌಕರರಿಗೆ 10 ವರ್ಷಗಳಿಂದಲೂ 10 ಪೈಸೆಯನ್ನೂ ಕೂಡಾ ಹೆಚ್ಚಳ ಮಾಡಿಲ್ಲ. ಬದಲಿಗೆ ಅನುದಾನವನ್ನು ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡಲು ಶಿಫಾರಸು ಮಾಡಿದೆ. ಈಗಾಗಲೇ ಮಂಡ್ಯ-ಮೈಸೂರು ಜಿಲ್ಲೆಯಲ್ಲಿ ಅಕ್ಷಯಪಾತ್ರೆ ಫೌಂಡೇಷನ್ ಸಂಸ್ಥೆಯಿಂದ ಬಿಸಿಯೂಟ ನೀಡಲು ಚಿಂತನೆ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ಯೋಜನೆ ಖಾಸಗಿ ಸಂಘ ಸಂಸ್ಥೆಗಳಿಗೆ ಕೊಡುವ ಬಗ್ಗೆ ಸರ್ಕಾರ ಬಹಳಷ್ಟು ಆಸಕ್ತಿ ತೋರಿಸುತ್ತಿದೆ ಎಂದರು.

ಅಲ್ಲದೇ, ಕಳೆದ 18-19 ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಮಾಡಿ ಯೋಜನೆಯನ್ನು ಯಶಸ್ವಿಯತ್ತ ನಡೆಸುತ್ತಿದ್ದರೂ ಕೂಡಾ, ಈ ರೀತಿಯ ಖಾಸಗೀಕರಣ ಕಡೆ ಗಮನ ಹರಿಸಿ ಮಹಿಳೆಯರನ್ನು ಬೀದಿ ಪಾಲು ಮಾಡಲು ಹೊರಟಿದೆ. ಇಂತಹ ಖಾಸಗೀಕರಣದ ವಿರುದ್ದ ನಮ್ಮ ಹೋರಾಟ ತೀವ್ರಗೊಳಿಸಬೇಕಿದೆ ಎಂದು ಎಂ ಬಿ ಪುಷ್ಪ ಕರೆ ನೀಡಿದರು.

For All Latest Updates

TAGGED:

ABOUT THE AUTHOR

...view details