ಸಕಲೇಶಪುರ: ತಾಲೂಕಿನ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲಹಳ್ಳಿ ಗ್ರಾಮದಲ್ಲಿ ಹಾವು ಕಡಿದು ಬಾಲಕನೊರ್ವ ಮೃತಪಟ್ಟ ಘಟನೆ ನಡೆದಿದೆ.
ತೋಟದಲ್ಲಿ ಹಾವು ಕಚ್ಚಿ ಬಾಲಕ ಸಾವು - ಹಾವು ಕಚ್ಚಿ ಪಾಲಹಳ್ಳಿ ಬಾಲಕ ಸಾವು
ಹಾವು ಕಡಿದು 12 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜರುಗಿದೆ.
ಹಾವು ಕಚ್ಚಿ ಬಾಲಕ ಸಾವು
ಗ್ರಾಮದ ಶಶಿಕಲಾ ಎಂಬುವವರ ಪುತ್ರ ನಿಶಾಂತ(12) ಮೃತ ಬಾಲಕ : ಸೋಮವಾರ ಸಂಜೆ ಮನೆಯ ಮುಂಭಾಗದ ಕಾಫಿ ತೋಟದಲ್ಲಿದ್ದ ವೇಳೆ ಹಾವು ಕಡಿದಿದ್ದು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮೃತ ಬಾಲಕ ವನಗೂರು ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ತಂದೆ ಆಕಾಲಿಕ ಸಾವಿಗೆ ತುತ್ತಾಗಿದ್ದರು. ಯಸಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.