ಕರ್ನಾಟಕ

karnataka

ETV Bharat / state

ಹೇಮಾವತಿ ಜಲಾಶಯದ ಹಿನ್ನೀರಿನ ನಾಲೆಯಲ್ಲಿ ವ್ಯಕ್ತಿಯ ಶವ ಪತ್ತೆ - ಶವ ಪತ್ತೆ

ಅರಕಲಗೂಡು ತಾಲೂಕಿನ ಹೇಮಾವತಿ ಜಲಾಶಯದ ಹಿನ್ನೀರಿನ ಬಲಮೇಲ್ದಂಡೆ ನಾಲೆಯಲ್ಲಿ ವ್ಯಕ್ತಿಯೋರ್ವನ ಶವ ತೇಲಿ ಬಂದಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

deadbody found in hemavathi canal
ವ್ಯಕ್ತಿಯ ಶವ ಪತ್ತೆ

By

Published : Sep 4, 2020, 9:00 PM IST

ಅರಕಲಗೂಡು/ಹಾಸನ:ಅರಕಲಗೂಡು ಸಮೀಪದ ಹೇಮಾವತಿ ಬಲ ಮೇಲ್ದಂಡೆ ನಾಲೆಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಮಾಹಿತಿ ತಿಳಿದು ಬಂದಿಲ್ಲ .

ವ್ಯಕ್ತಿಯ ಶವ ಪತ್ತೆ

ತಾಲೂಕಿನ ಹೇಮಾವತಿ ಜಲಾಶಯದ ಹಿನ್ನೀರಿನ ಬಲಮೇಲ್ದಂಡೆ ನಾಲೆಯಲ್ಲಿ ಗುರುವಾರ ಬೆಳಗ್ಗೆ ಸುಮಾರು 7:00 ಗಂಟೆ ಸಮಯಕ್ಕೆ ಶವವೊಂದು ತೇಲುವ ಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಕಾಣಿಸಿತ್ತು.

ವಿಷಯ ತಿಳಿದು ಪಟ್ಟಣದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ನಾಲೆಯಿಂದ ಮೃತ ದೇಹವನ್ನು ಮೇಲೆ ತೆಗೆದು ತಾಲೂಕು ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಮೃತನ ಚಹರೆ ಗುರುತಿಸಲಾದಷ್ಟು ನೀರಿನಲ್ಲಿ ಕೊಳೆತು ಹೋಗಿರುವುದರಿಂದ ವ್ಯಕ್ತಿಯ ಬಗ್ಗೆ ಯಾವುದೇ ಗುರುತು ತಿಳಿದು ಬಂದಿಲ್ಲ.

ABOUT THE AUTHOR

...view details