ಹಾಸನ: ಹಾಸನಕ್ಕೆ 30 ವೆಂಟಿಲೇಟರ್, 20 ಆಮ್ಲಜನಕ ಸಾಂದ್ರಕಗಳನ್ನು ನೀಡುವ ಮೂಲಕ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್ ನಿನ್ನೆ ನೀಡಿದ್ದ ತಮ್ಮ ಮಾತನ್ನ ಉಳಿಸಿಕೊಂಡಿದ್ದಾರೆ.
ಕೊಟ್ಟ ಮಾತು ಉಳಿಸಿಕೊಂಡ ಡಿಸಿಎಂ ಡಾ. ಅಶ್ವತ್ಥನಾರಾಯಣ - ಕ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್
ಹಾಸನ ಜಿಲ್ಲೆಯ ಪ್ರವಾಸದ ವೇಳೆ ಸೋಮವಾರದ ಒಳಗೆ ವೆಂಟಿಲೇಟರ್ ಮತ್ತು ಜಿಲ್ಲೆಗೆ ಬೇಕಾಗುವ 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಮಾಧ್ಯಮದೊಂದಿಗೆ ಹೇಳಿಕೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ.
ಹಾಸನ ಜಿಲ್ಲೆಯ ಪ್ರವಾಸದ ವೇಳೆ, ಸೋಮವಾರದ ಒಳಗೆ ವೆಂಟಿಲೇಟರ್ ಮತ್ತು ಜಿಲ್ಲೆಗೆ ಬೇಕಾಗುವ 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಮಾಧ್ಯಮದೊಂದಿಗೆ ಹೇಳಿಕೆ ನೀಡಿದ್ದರು. ಅದರಂತೆ ಇವತ್ತು ಹಾಸನ ಜಿಲ್ಲೆಗೆ 30 ವೆಂಟಿಲೇಟರ್ ಹಾಗೂ 20 ಆಮ್ಲಜನಕ ಸಾಂದ್ರಕಗಳನ್ನು ಎರಡು ವಾಹನಗಳಲ್ಲಿ ಕಳುಹಿಸಿಕೊಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ನಿನ್ನೆ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಮ್ಲಜನಕ ಕೊರತೆ ಬಗ್ಗೆ ಉಪಮುಖ್ಯಮಂತ್ರಿಯ ಗಮನಸೆಳೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ಗೆ ವಿಚಾರ ತಿಳಿಸಿ, ಕೂಡಲೇ ವೆಂಟಿಲೇಟರ್ ಕಳಿಸಿ ಕೊಡುವ ಭರವಸೆಯನ್ನು ನೀಡಿದ್ದರು. ಅದರಂತೆ ಇವತ್ತು ಬೆಂಗಳೂರಿಂದ ಹಾಸನಕ್ಕೆ 30 ವೆಂಟಿಲೇಟರ್, 20 ಆಮ್ಲಜನಕ ಸಾಂದ್ರಕಗಳು ಆಗಮಿಸಿವೆ.