ಕರ್ನಾಟಕ

karnataka

ETV Bharat / state

ಖಾಸಗಿ ಆಸ್ಪತ್ರೆಗಳ ಬಿಲ್​ಗೆ ಮೂಗುದಾರ ಹಾಕದಿದ್ದರೆ ನಾನೇ ನಿಂತು ಅವುಗಳಿಗೆ ಬೀಗ ಹಾಕಿಸುವೆ: ರೇವಣ್ಣ - hospital money laundering case 2020

'ಕಂಚಮಾರನಹಳ್ಳಿಯ ಮಹಿಳೆಯೊಬ್ಬಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರೂ ಅವರಿಂದ 10 ಲಕ್ಷ ಬಿಲ್ ವಸೂಲಿ ​ ಮಾಡಿದ್ದಾರೆ. ಜೈನ ಸಮಾಜದ ಒಬ್ಬರಿಗೆ 16 ಲಕ್ಷ ರೂ. ಬಿಲ್ ಮಾಡಲಾಗಿದೆ. ಒಂದು ಹಾಸಿಗೆಗೆ ದಿನಕ್ಕೆ 16 ಸಾವಿರ ಬಿಲ್ ವಿಧಿಸಲಾಗುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ನಾನು ಎಂದೂ ನೋಡಿರಲಿಲ್ಲ' ಎಂದು ಮಾಜಿ ಸಚಿವ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

DC should immediately call a meeting of all private hospitals ; Revanna
ಮಾಜಿ ಸಚಿವ ಹೆಚ್.​ಡಿ. ರೇವಣ್ಣ

By

Published : Oct 21, 2020, 5:35 PM IST

ಹಾಸನ :ರೋಗಿಗಳಿಂದ ಹಣ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ಧ ಜಿಲ್ಲಾಧಿಕಾರಿ ಈ ಕೂಡಲೇ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ಕರೆದು ಸೂಚನೆ ಕೊಡಬೇಕು. ಇಲ್ಲವಾದರೆ ನಾನೇ ಚಾರ್ಜ್ ತೆಗೆದುಕೊಂಡು ಆಸ್ಪತ್ರೆಗೆ ಬೀಗ ಹಾಕಿಸುವೆ ಎಂದು ಮಾಜಿ ಸಚಿವ ಹೆಚ್.​ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಡಳಿತ ಇದಿಯೋ ಇಲ್ಲವೋ ಗೊತ್ತಿಲ್ಲ. ಜಿಲ್ಲಾಧಿಕಾರಿ ಪ್ರಾಮಾಣಿಕರಾಗಿದ್ದರೂ ಈ ರೀತಿಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಅಥವಾ ಯಾವುದೇ ಖಾಯಿಲೆ ಇದೆ ಎಂದು ಹೋದರೆ ರೋಗಿಗಳಿಂದ 10 ರಿಂದ 15 ಲಕ್ಷ ರೂ. ಬಿಲ್ ಮಾಡುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಗಳು ಕೇಳುತ್ತಿಲ್ಲ ಎಂದು ದೂರಿದರು.

ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೆಚ್ಚಿನ ಬಿಲ್ ಮಾಡಿ ಹಣ ಪಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ ಎಂದ ಅವರು, ತಕ್ಷಣದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಯವರನ್ನು ಕರೆದು ಸೂಚನೆ ಕೊಡಬೇಕು. ಇಲ್ಲವಾದರೆ ನಾವೆಲ್ಲರೂ ಸೇರಿ ಖಾಸಗಿ ಆಸ್ಪತ್ರೆಯ ಬಾಗಿಲು ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಂಚಮಾರನಹಳ್ಳಿಯ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರೂ ಅವರಿಂದ 10 ಲಕ್ಷ ಬಿಲ್ ಕಲೆಕ್ಟ್​ ಮಾಡಿದ್ದಾರೆ. ಜೈನ ಸಮಾಜದ ಓರ್ವರಿಗೆ 16 ಲಕ್ಷ ರೂ. ಬಿಲ್ ಮಾಡಲಾಗಿದೆ. ಒಂದು ಹಾಸಿಗೆಗೆ ದಿನಕ್ಕೆ 16 ಸಾವಿರ ಬಿಲ್ ವಿಧಿಸಲಾಗುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ನಾನು ಎಂದೂ ನೋಡಿರಲಿಲ್ಲ ಎಂದು ಆತಂಕವ್ಯಕ್ತಪಡಿಸಿದ ರೇವಣ್ಣ, ಖಾಸಗಿ ಆಸ್ಪತ್ರೆಯ ಸಭೆ ಕರೆಯದಿದ್ದರೆ ಜಿಲ್ಲಾಧಿಕಾರಿ ಮೇಲೆ ನಾನೇ ಚಾರ್ಜ್ ತೆಗೆದುಕೊಳ್ಳುತ್ತೇನೆ ಎಂದರು.

ಸಹಕಾರ ಸಂಘಗಳ ನಿಬಂಧಕ ಸುನೀಲ್ ಎಂಬುವನು ಮತದಾರ ಪಟ್ಟಿಯಿಂದ ಅನೇಕರ ಹೆಸರು ತೆಗೆದು ಹಾಕಿದ್ದಾನೆ. ಚಿಕ್ಕಮಗಳೂರು, ಸಂಜೀವಿನಿ ಆಸ್ಪತ್ರೆ, ಜನತಾ ಬಜಾರ್, ಸಕಲೇಶಪುರ ಉಪನಿಬಂಧಕ ಮತ್ತು ಡಿಸಿಸಿ ಬ್ಯಾಂಕ್​ಗೂ ಈತ ಒಬ್ಬನೇ ಉಪನಿಬಂಧಕನಾಗಿದ್ದಾನೆ. ಇನ್ನು ಈತನ ಹೆಂಡತಿ ಲೋಕಾಯುಕ್ತ​ ವೃತ್ತ ಇನ್ಸ್​ಪೆಕ್ಟರ್​​ ಎಂದು ಹೇಳಿಕೊಂಡು ಯಾವ ಆಸ್ಪತ್ರೆಗೂ ಹೋದರೂ ದುಡ್ಡೆ ಕೊಡುವುದಿಲ್ಲ. ಇದನ್ನು ಎಸ್ಪಿ ಅವರ ಗಮನಕ್ಕೂ ತರಲಾಗಿದೆ. ಈ ಎಲ್ಲ ಇಲಾಖೆಗಳಿಗೆ ಈತ ಒಬ್ಬನೇ ಉಸ್ತುವಾರಿ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೂ ತಿಳಿಸಿರುವುದಾಗಿ ಹೇಳಿದರು.

ಮಾಜಿ ಸಚಿವ ಹೆಚ್.​ಡಿ. ರೇವಣ್ಣ

ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಏನು ಫೋರ್ಜರಿ ನಡೆದಿದೆ ಎಂಬುದರ ಬಗ್ಗೆ ಡಿ.ಆರ್. ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಲ್ಲದೇ ಈ ಕೂಡಲೇ ತನಿಖೆ ಮಾಡಿ ಇಂತಹವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಒಂದು ಕಡೆ ಕೊರೊನಾದಿಂದ ಜನ ಸಾಯುತ್ತಿದ್ದರೆ, ಇನ್ನೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details