ಕರ್ನಾಟಕ

karnataka

ETV Bharat / state

ಬಡವರ ಬೇಡಿಕೆ ಶೀಘ್ರ ಈಡೇರಿಸದಿದ್ದರೆ ಉಗ್ರ ಹೋರಾಟ: ದಲಿತ ಸಂಘರ್ಷ ಸಮಿತಿ ಎಚ್ಚರಿಕೆ - ಸಕಲೇಶಪುರ ಸುದ್ದಿ

ಕೇವಲ ಉಳ್ಳವರಿಗೆ ಹಾಗೂ ಹೆಚ್.ಆರ್.ಪಿ ಸಂತ್ರಸ್ತರಿಗೆ ಮಾತ್ರ ಕೂಡಲೇ ಜಮೀನು ಪೋಡಿ ಹಾಗೂ ದುರಸ್ತಿ ಮಾಡಿಕೊಡಲಾಗುತ್ತಿದೆ. ಬಡವರ ಜಮೀನುಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ.

dsspressmt
ದಲಿತ ಸಂಘರ್ಷ ಸಮಿತಿ

By

Published : Jun 14, 2020, 7:15 AM IST

ಸಕಲೇಶಪುರ (ಹಾಸನ): ತಾಲೂಕಿನ ಎಲ್ಲಾ ಜಾತಿಯ ಬಡವರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಂಘಟನೆ ವತಿಯಿಂದ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ಬರೆಯುವ ಮೂಲಕ ಪತ್ರ ಚಳವಳಿಆರಂಭಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಕರ್ನಾಟಕ (ರಿ) ಸಂಘಟನೆಯ ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್ ಹೇಳಿದರು.

ದಲಿತ ಸಂಘರ್ಷ ಸಮಿತಿ

ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಫಾರಂ ನಂ. 53 ನಮೂನೆಯ ದರಖಾಸ್ತು ಜಮೀನಿನ ದುರಸ್ತಿ ಮತ್ತು ಹದ್ದುಬಸ್ತು ವಿಚಾರಕ್ಕೆ ಬಡವರ ಅರ್ಜಿಗಳನ್ನು ವಿಲೇವಾರಿ ಮಾಡಲು ವಿನಾಕಾರಣ ತಡ ಮಾಡಲಾಗುತ್ತಿದೆ. ಬಡವರನ್ನು ಸತಾಯಿಸಿ ಅಲೆದಾಡಿಸಲಾಗುತ್ತಿದೆ. ಕೇವಲ ಉಳ್ಳವರಿಗೆ ಹಾಗೂ ಹೆಚ್.ಆರ್.ಪಿ ಸಂತ್ರಸ್ತರಿಗೆ ಮಾತ್ರ ಕೂಡಲೇ ಜಮೀನು ಪೋಡಿ ಹಾಗೂ ದುರಸ್ತಿ ಮಾಡಿಕೊಡಲಾಗುತ್ತಿದೆ. ಬಡವರ ಜಮೀನುಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಹಾನುಬಾಳ್ ಮಾತನಾಡಿ, ತಾಲೂಕಿನ ಹಲವು ಗ್ರಾಮಗಳಲ್ಲಿ ಕೂಲಿ ಕಾರ್ಮಿಕರ ಮನೆಗಳಿಗೆ ವಿದ್ಯುತ್ ವ್ಯವಸ್ಥೆ ಇರುವುದಿಲ್ಲ, ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ದೀಪದ ಬೆಳಕಿನಲ್ಲಿ ಓದಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಯಾವ ಕುಟುಂಬಗಳಿಗೆ ವಿದ್ಯುತ್ ವ್ಯವಸ್ಥೆ ಇರುವುದಿಲ್ಲವೋ ಅಂತವರಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಬಡವರ ಕೆಲಸಗಳನ್ನು ಮಾಡದೆ ಕಾಲಹರಣ ಮಾಡುತ್ತಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡುತ್ತೇವೆ. ಕೋವಿಡ್-19ನಿಂದ ಜನ ಆತಂಕದಲ್ಲಿದ್ದು, ಇಂತಹ ಸಂದರ್ಭದಲ್ಲಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ತೆರೆಯಲು ಅವಕಾಶ ನೀಡಿರುವುದರಿಂದ ತಾಲೂಕಿನಲ್ಲಿ ಕೊರೊನಾ ಪ್ರಕರಣ ಕಂಡುಬರುವ ಸಾಧ್ಯತೆಯಿದೆ. ಕೂಡಲೇ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಮೋಹನ್ ಕುಮಾರ್ ಅಚ್ಚರಡಿ, ಯುವ ಮುಖಂಡ ಎ.ಇ ಮೋಹನ್ ಹಾಜರಿದ್ದರು.

ABOUT THE AUTHOR

...view details