ಹೊಳೆನರಸೀಪುರ (ಹಾಸನ):ಅಂಬೇಡ್ಕರ್ ಇರುವ ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ದಲಿತ ಮುಖಂಡರು ಮತ್ತು ಜನಪರ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ರ ಮುಂದೆ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳ ಬಂಧನಕ್ಕೆ ಪ್ರತಿಭಟನೆ - ಸಚಿವ ಕೆ.ಗೋಪಾಲಯ್ಯ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಗೆ ಸಂಬಂಧಪಟ್ಟ ಅಂಬೇಡ್ಕರ್ ಇರುವ ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ, ದಲಿತ ಮುಖಂಡರು ಮತ್ತು ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ
ಹೊಳೆನರಸೀಪುರ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19 ಪರಿಶೀಲನಾ ಸಭೆಗೆ ಸಚಿವ ಕೆ.ಗೋಪಾಲಯ್ಯ ಹಾಜರಾಗುವ ವೇಳೆ ಪುರಸಭಾ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಖಾಸಗಿ ಮನರಂಜನಾ ವಾಹಿನಿಯಲ್ಲಿ ಮಹಾನಾಯಕ ಎಂಬ ಧಾರವಾಹಿ ಪ್ರಸಾರವಾಗುತ್ತಿದ್ದು, ಹೊಳೆನರಸೀಪುರ ಬಯಲು ರಂಗಮಂದಿರದ ಬಳಿ ಈ ಧಾರವಾಹಿಯ ಬ್ಯಾನರ್ ಒಂದನ್ನು ಹಾಕಲಾಗಿತ್ತು.
ಆದರೆ, ಮಂಗಳವಾರ ರಾತ್ರಿ ಕಿಡಿಗೇಡಿಗಳು ಕುಡಿದ ಅಮಲಿನಲ್ಲಿ ಬ್ಯಾನರ್ನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಹೀಗಾಗಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.