ಕರ್ನಾಟಕ

karnataka

ETV Bharat / state

ಹಾಸನ: ಅಶ್ವತ್ಥ ನಾರಾಯಣ್ ವಿರುದ್ಧ ಡಿ ಕೆ ಸುರೇಶ್ ಕೆಂಡಾಮಂಡಲ - ಈಟಿವಿ ಭಾರತ್ ಕನ್ನಡ ಸುದ್ದಿ

ಮಹಿಳೆಯರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಬಿಜೆಪಿ ವಿರುದ್ಧ ಬೆಂಗಳೂರಿನ ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಅವರು ವಾಗ್ದಾಳಿ ನಡೆಸಿದರು.

ಸಂಸದ ಡಿ ಕೆ ಸುರೇಶ್
ಸಂಸದ ಡಿ ಕೆ ಸುರೇಶ್

By

Published : Jan 17, 2023, 7:52 PM IST

ಹಾಸನ: ಡಬಲ್ ಇಂಜಿನ್ ಸರ್ಕಾರ ಮಹಿಳೆಯರ ರಕ್ಷಣೆಗೆ ಯಾವತ್ತೂ ಕೂಡ ಮುಂದಾಗಿಲ್ಲ. ಕೇವಲ ಭಾವನಾತ್ಮಕ ವಿಚಾರದಲ್ಲಿ ಮೂಗು ತೂರಿಸಿರುವ ಅವರು ಮಹಿಳೆಯರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಬಿಜೆಪಿ ವಿರುದ್ಧ ಬೆಂಗಳೂರಿನ ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಅವರು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ರೂ. 10 ಸಿಲಿಂಡರ್ ದರ ಹೆಚ್ಚಾಗಿದ್ದಕ್ಕೆ ಸ್ಮೃತಿ ಇರಾನಿ ಸಿಲಿಂಡರ್​​ ಎತ್ತಿಕೊಂಡು ಮೆರವಣಿಗೆ ಮಾಡಿದರು. ಆಗ ಇವರು ಎಲ್ಲೋಗಿದ್ರು? ಇಡೀ ಕುಟುಂಬವನ್ನ ನಿರ್ವಹಣೆ ಮಾಡುವವಳು ಮಹಿಳೆ ಅಂತ ಮಹಿಳೆಗೆ ಕಾಂಗ್ರೆಸ್ ಒಂದು ಉನ್ನತ ಸ್ಥಾನ ಕೊಟ್ಟಿದೆ. ನಾ ನಾಯಕಿ ಎಂಬ ಕಾರ್ಯಕ್ರಮವನ್ನು ನಾ ನಾಲಾಯಕಿ ಅಂತ ಕರೆಯುವುದಾದರೆ ಇವರ ಚಿಂತನೆ ಯಾವ ರೀತಿ ಇದೆ. ಇದೆಲ್ಲವನ್ನ ಗಮನಿಸುವ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಹಿಂದೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಎನ್​ಡಿಎ ಸಹಕಾರ ನೀಡಲಿಲ್ಲ. ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಆ ಮನುಷ್ಯ ಯಾರು? ಅವನ ಹೆಸರು ಹೇಳುವುದಕ್ಕೂ ನನಗೆ ಇಷ್ಟ ಇಲ್ಲ ಅಂತ ಬೇಸರದಲ್ಲಿಯೇ ಅಶ್ವತ್ಥ​ ನಾರಾಯಣ್ ವಿರುದ್ಧ ಕೆಂಡಮಂಡಲವಾದರು.

ಅರಸೀಕೆರೆ ಕಾಂಗ್ರೆಸ್​ನಲ್ಲಿ ಅಸಮಾಧಾನ:ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಚಾಮರಾಜನಗರದಲ್ಲಿ ನೀಡಿರುವ ಹೇಳಿಕೆ ಹಿನ್ನೆಲೆ ಅರಸೀಕೆರೆ ಕಾಂಗ್ರೆಸ್​ನಲ್ಲಿ ಈಗ ಅಸಮಾಧಾನ ಭುಗಿಲೆದ್ದಿದೆ. ಅರಸೀಕೆರೆ ಕ್ಷೇತ್ರದ ಶಾಸಕ ಕೆ ಎಂ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ವಿಚಾರವನ್ನು ಸ್ಥಳೀಯರ ಗಮನಕ್ಕೆ ತಾರದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿದೆ ಅಂತ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಶಿವಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅರಸೀಕೆರೆ ನಗರದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿದ ಶಿವಪ್ಪ ದೃವನಾರಾಯಣ್ ಪಕ್ಷದ ಹಿರಿಯರು, ಅವರು ದೊಡ್ಡ ಜವಾಬ್ದಾರಿ ಹೊಂದಿದವರು. ಸ್ಥಳೀಯವಾಗಿ ಚರ್ಚಿಸದೇ ಏಕಾಏಕಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎಂಬ ವಿಚಾರವನ್ನು ಎಲ್ಲಿಯೋ ಕೂತು ಹೇಳುವುದು ತರವಲ್ಲ. ಅರಸೀಕೆರೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ನಿಷ್ಠಾವಂತರಾಗಿ ಪಕ್ಷಕ್ಕೆ ದುಡಿದಿದ್ದು, ಈಗ ಏಕಾಏಕಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಬರುತ್ತಾರೆ ಎಂದರೆ ಅವರು ಗೆಲ್ಲುವುದಕ್ಕಾಗಿ ಕಾಂಗ್ರೆಸ್ ಗೆ ಬರುತ್ತಿದ್ದಾರೆ ಎಂಬರ್ಥ. ಗೆದ್ದ ನಂತರ ನಮ್ಮ ಮೂಲ ಕಾಂಗ್ರೆಸ್ಸಿಗರನ್ನ ದೂರ ತಳ್ಳುತ್ತಾರೆ ಎಂಬ ಭಾವನೆ ಹಲವಾರು ಕಾರ್ಯಕರ್ತರಲ್ಲಿದೆ.

ಚಾಮರಾಜನಗರದಲ್ಲಿ ಹೇಳಿಕೆ ಕೊಟ್ಟ ಬೆನ್ನಿಗೆ ಇಲ್ಲಿನ ಜೆಡಿಎಸ್ ಶಾಸಕರು ಸಭೆ ನಡೆಸಿ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಆದರೆ, ಸ್ಥಳೀಯ ಮಟ್ಟದ ಮುಖಂಡರ ಜೊತೆ ಕಾರ್ಯಕರ್ತರ ಜೊತೆ ಮಾತುಕತೆ ನಡೆಸದೆ ಕೇವಲ ಹೈಕಮಾಂಡ್ ಮೊರೆ ಹೋದರೆ ಸ್ಥಳೀಯರ ಅವಶ್ಯಕತೆ ಇಲ್ಲವೇ ಎಂಬ ಆಗ್ರಹ ಮಾಡುತ್ತಾ, ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮುನ್ನವೇ ಈಗ ಅಸಮಾಧಾನ ಭುಗಿಲೆದ್ದಿದೆ. ಇನ್ನು ಪ್ರಜಾ ಧ್ವನಿ ಯಾತ್ರೆ ದಿನ ಸೇರ್ಪಡೆಗೊಳ್ಳುವ ಮುನ್ಸೂಚನೆ ನೀಡಿರುವ ಶಾಸಕಾಂಗ ಶಿವಲಿಂಗೇಗೌಡರನ್ನು ಸ್ಥಳೀಯರು ಪಕ್ಷಕ್ಕೆ ಆಹ್ವಾನ ಮಾಡುತ್ತಾರೆಯೇ ಅಥವಾ ತಿರಸ್ಕರಿಸುತ್ತಾರೆಯೇ ಕಾದು ನೋಡಬೇಕಿದೆ.

ಓದಿ:ಸಂಕ್ರಮಣ ಮುಗಿಯುತ್ತಿದ್ದಂತೆ ಬಿಜೆಪಿ ಫುಲ್ ಆ್ಯಕ್ಟೀವ್: ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಹೈಕಮಾಂಡ್ ಟಾಪ್ ಲೀಡರ್ಸ್​​

ABOUT THE AUTHOR

...view details