ಹಾಸನ: ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ರಾಜಕೀಯ ದ್ರುವೀಕರಣವಾಗಲಿದೆ ಎಂದು ಹೇಳಿರುವ ಸಚಿವ ಸಿ.ಟಿ.ರವಿ ಅವರ ಭವಿಷ್ಯ ಹಲವು ಕುತೂಹಲಕ್ಕೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ರಾಜಕೀಯ ದ್ರುವೀಕರಣವಾಗಲಿದೆ : ಸಚಿವ ಸಿ.ಟಿ.ರವಿ - ಸಿ.ಟಿ ರವಿ
ಹಾಸನ ಶಾಸಕ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಿ.ಟಿ ರವಿ ದ್ರುವೀಕರಣದ ಭವಿಷ್ಯ ಹೇಳಿದ್ದಾರೆ. ಪ್ರೀತಂ ಅವರಿಗೆ ಸಚಿವ ಸ್ಥಾನ ಹಂಚಿಕೆ ಇರಲಿ ಮುಂದೆ ಯಾವ ರೀತಿ ರಾಜ್ಯದಲ್ಲಿ ರಾಜಕೀಯ ದೃವೀಕರಣವಾಗಲಿದೆ ಕಾದು ನೋಡಿ ಎಂದಿದ್ದಾರೆ.
ಸಕಲೇಶಪುರ ತಾಲ್ಲೂಕಿನ ನೆರೆ ಹಾವಳಿ ಪ್ರದೇಶದ ವೀಕ್ಷಣೆ ಬಳಿಕ ಮಾತನಾಡಿದ ಅವರು, ಹಾಸನ ಶಾಸಕ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ದ್ರುವೀಕರಣದ ಭವಿಷ್ಯ ಹೇಳಿದ್ದಾರೆ. ಪ್ರೀತಂ ಅವರಿಗೆ ಸಚಿವ ಸ್ಥಾನ ಹಂಚಿಕೆ ಇರಲಿ ಮುಂದೆ ಯಾವ ರೀತಿ ರಾಜ್ಯದಲ್ಲಿ ರಾಜಕೀಯ ದೃವೀಕರಣವಾಗಲಿದೆ ಕಾದು ನೋಡಿ ಎಂದ್ರು.
ರಾಜಕೀಯವಾಗಿ ಎಲ್ಲರು ಸಮರ್ಥರೆ. ನಮಗಿಂತ ಶಕ್ತಿ ಇರುವವರೇ. ಪಕ್ಷದಲ್ಲಿ ಯಾವುದೇ ಆಸಮಾದಾನವಿಲ್ಲ. ಯೋಗ ಕೂಡಿ ಬಂದವರು ನಾಳೆ ಆಗಬಹುದು, ನಾಡಿದ್ದು ಆಗಬಹುದು. ಮಂತ್ರಿಗಿರಿಯೂ ಸಿಗಬಹುದು. ಅವರಿಗೆ ಇನ್ನು ಯೋಗ ಕೂಡಿ ಬಂದಿಲ್ಲ. ಹಾಗಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಕರ್ನಾಟಕದಲ್ಲಿ ರಾಜಕೀಯ ದ್ರುವೀಕರಣವಾಗುತ್ತೆ. ದೊಡ್ಡ ದೊಡ್ಡವರು ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ. ಬೇರೆ ಬೇರೆ ಪಕ್ಷದವರು ನಮ್ಮ ಮನೆ ಬಾಗಿಲು ತೆಗೆಯುವುದನ್ನು ಕಾಯುತ್ತಿದ್ದಾರೆ. ಹೀಗಿದ್ದಾಗ ನಮ್ಮವರೇಕೆ ಬೇರೆ ಪಕ್ಷಕ್ಕೋಗುತ್ತಾರೆಂದು ಪ್ರಶ್ನಿಸಿದ ಅವರು, ಮಾಜಿ ಸಚಿವ ಹೆಚ್.ಡಿ.ರೆವಣ್ಣ ಅವರ ಫೋನ್ ಕೂಡ ಕದ್ದಾಲಿಖೆಯಾಗಿದೆ ಎಂಬ ಮಾಹಿತಿ ಇದೆ ಎಂದಿದ್ದಾರೆ.