ಹಾಸನ :ಉಮೇಶ್ ಕತ್ತಿ ಅವರು ಯಾರ ಸಾವನ್ನು ಬಯಸಬಾರದಿತ್ತು. ನೀಡಿದ್ದ ಹೇಳಿಕೆಗೆ ಕ್ಷಮೆಯಾಚನೆ ಮಾಡಿದ್ದಾರೆ. ಅದೊಂದು ಅಕ್ಷಮ್ಯ ಅಪರಾದ. ಅಕ್ಕಿ ಬದಲು ರಾಗಿ ಕೊಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಡಬೇಕಿತ್ತು ಎಂದು ಸಿ.ಟಿ.ರವಿ ಹೇಳಿದರು.
ಉಮೇಶ್ ಕತ್ತಿ ಹೇಳಿಕೆ ಅಕ್ಷಮ್ಯ ಅಪರಾಧ ಅವರು ಯಾರ ಸಾವನ್ನೂ ಬಯಸಬಾರದು: ಸಿಟಿ ರವಿ - ಉಮೇಶ್ ಕತ್ತಿ
ಮನಸ್ಥಿತಿಯಲ್ಲ. ಅಕ್ಕಿ ಬದಲು ರಾಗಿ ಕೊಡುತ್ತಿದ್ದೇವೆ ಎಂದು ಮನವರಿಕೆ ಮಾಡಿ ಕೊಡಬೇಕಿತ್ತು ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಮೇಶ್ ಕತ್ತಿ ಅವರು ಮಾತನಾಡಿದ್ದು ಸರಿಯಲ್ಲ. ಬೇರೆಯವರ ಸಾವನ್ನು ಬಯಸುವುದು ಒಳ್ಳೆಯ ಮನಸ್ಥಿತಿಯಲ್ಲ. ಅಕ್ಕಿ ಬದಲು ರಾಗಿ ಕೊಡುತ್ತಿದ್ದೇವೆ ಎಂದು ಮನವರಿಕೆ ಮಾಡಿ ಕೊಡಬೇಕಿತ್ತು. ನಾವು ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಈ ತರಹದ ನಡವಳಿಕೆಗಳು ವೈಯಕ್ತಿಕವಾಗಿ, ಸರ್ಕಾರಕ್ಕಾಗಲಿ, ಸಚಿವ ಸ್ಥಾನಕ್ಕಾಗಲಿ ಶೋಭೆ ತರುವುದಿಲ್ಲ ಎಂದು ಉಮೇಶ್ ಕತ್ತಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ರು.
ಈ ಹೇಳಿಕೆ ವೈಯಕ್ತಿಕವಾಗಿ ಚಪ್ಪಡಿ ಎಳೆದುಕೊಳ್ಳುವುದನ್ನು ತೋರುತ್ತದೆ. ನಾನು ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಹೇಳಿಕೆ ನೀಡುವ ಮುನ್ನ ಯೋಚಿಸಿಬೇಕು. ಆತುರತೆಯಿಂದ ಮಾತನಾಡಿದ್ರೆ ಇಂತಹ ಪ್ರಮಾದಗಳು ಜರುಗುತ್ತವೆ. ಅದಕ್ಕೆ ಅವಕಾಶ ಕೊಡಬಾರದು. ಇದು ವೈಯಕ್ತಿವಾಗಿ, ಸರ್ಕಾರಕ್ಕೆ ಮತ್ತು ಪಕ್ಷಕ್ಕೂ ಶೋಭೆ ತರುವಂತಹದುದಲ್ಲ ಎಂದರು.