ಅರಕಲಗೂಡು:ರಾಜ್ಯ ಸರ್ಕಾರದ ಆದೇಶದಂತೆ ತಾಲ್ಲೂಕಿನ ಪ್ರತಿ ಹೋಬಳಿಯಲ್ಲೂ ರೈತರ ಜಮೀನಿನ ಬೆಳೆಯ ಬಗ್ಗೆ ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಲು ಎಲ್ಲಾ ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿ ವರ್ಗದವರಿಗೆ ನಿರ್ದೇಶಿಸಲಾಗಿದೆ.
ಈ ಬಗ್ಗೆ ಬೆಳೆ ಸಮೀಕ್ಷೆ ಪರಿಶೀಲನೆಗಾಗಿ ಇಂದು ತಹಶಿಲ್ದಾರ್ ಮಲ್ಲಿಪಟ್ಟಣ ಹೋಬಳಿಯ ಜೋಗಿ ಹೊಸಹಳ್ಳಿ ಮತ್ತು ಹೊಳಲಗೋಡು ಕಂದಾಯ ವೃತ್ತದ ಜಮೀನುಗಳಿಗೆ ಸ್ವತಃ ಭೇಟಿ ನೀಡಿ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.