ಕರ್ನಾಟಕ

karnataka

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ: ನಾಗರಾಜ್

ಹಾಸನ ಜಿಲ್ಲೆಯ 202 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 1,25,258 ರೈತರಿಗೆ ಶೂನ್ಯ ಬಡ್ಡಿದರದಲ್ಲಿ 6,12,30,413 ರೂಪಾಯಿಗಳ ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ನಾಗರಾಜ್ ತಿಳಿಸಿದ್ದಾರೆ.

By

Published : Feb 28, 2020, 9:38 AM IST

Published : Feb 28, 2020, 9:38 AM IST

crop-loans-given-to-farmers-at-zero-interest-rates-by-primary-agricultural-cooperatives-said-by-nagaraj
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ನಾಗರಾಜ್

ಹಾಸನ:ಜಿಲ್ಲೆಯ 202 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 1,25,258 ರೈತರಿಗೆ ಶೂನ್ಯ ಬಡ್ಡಿದರದಲ್ಲಿ 6,12,30,413 ರೂಪಾಯಿಗಳ ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ನಾಗರಾಜ್ ತಿಳಿಸಿದ್ದಾರೆ.

ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ-2018 ರ ಅನ್ವಯ ಹೊರಬಾಕಿ ಹೊಂದಿದ್ದ 1,19,814 ರೈತರ 541.41 ಕೋಟಿ ಬೆಳೆ ಸಾಲದಲ್ಲಿ 502.30ಕೋಟಿ ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ನಾಗರಾಜ್

ಪ್ರಸಕ್ತ 1,11,485 ರೈತರಿಗೆ ರೂ. 451.78 ಕೋಟಿ ಸಾಲ ಮನ್ನಾ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ನೌಕರರು, ಪಿಂಚಣಿದಾರರು, ಆದಾಯ ತೆರಿಗೆದಾರರು ಮತ್ತು ಸುಸ್ತಿದಾರರನ್ನು ಹೊರತುಪಡಿಸಿ ಉಳಿಕೆ 7042 ರೈತರಿಗೆ ರೂ.41.56 ಕೋಟಿ ಸಾಲ ಮನ್ನಾ ಹಣ ಬ್ಯಾಂಕಿಗೆ ಬರಲು ಬಾಕಿ ಇರುತ್ತದೆ. ಹೊಸ ಸದಸ್ಯರು ಹಾಗೂ ಸಾಲ ಮನ್ನಾ ಆದ ರೈತರು ಸೇರಿ ಪ್ರಸಕ್ತ ಹಂಗಾಮಿಗೆ ಶೂನ್ಯ ಬಡ್ಡಿದರದಲ್ಲಿ 1,25,258 ರೈತರಿಗೆ ರೂ. 612.30ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ ಎಂದರು.

ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​​ 1953 ರಲ್ಲಿ ರೂ. 8.53 ಲಕ್ಷ ದುಡಿಯುವ ಬಂಡವಾಳದೊಂದಿಗೆ ಪ್ರಾರಂಭವಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 32 ಶಾಖೆಗಳನ್ನು ಹೊಂದಿದೆ. ಪ್ರಸಕ್ತ ರೂ. 1037.90 ಕೋಟಿಗಳ ಠೇವಣಿ, ರೂ. 37.68 ಕೋಟಿ ಷೇರು ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನಿಂದ ಕೃಷಿ ಉದ್ದೇಶಕ್ಕಾಗಿ 125,258 ರೈತರಿಗೆ ಅಲ್ಪಾವಧಿ ಬೆಳೆ ಸಾಲವಾಗಿ ರೂ. 612.30 ಕೋಟಿ ಮತ್ತು ಮಧ್ಯಮಾವಧಿ ಸಾಲವಾಗಿ ರೂ. 29.65 ಕೋಟಿ, ಒಟ್ಟು ರೂ. 641.95 ಕೋಟಿ ಸಾಲ ನೀಡಲಾಗಿದೆ. ಇದರೊಂದಿಗೆ ಕೃಷಿಯೇತರ ಉದ್ದೇಶಕ್ಕಾಗಿ ರೂ. 284.38 ಕೋಟಿ ಸಾಲ ನೀಡಿದ್ದು, ರೂ. 1460.95 ಕೋಟಿ ದುಡಿಯುವ ಬಂಡವಾಳದೊಂದಿಗೆ ರೈತರಿಗೆ ನಿರಂತರವಾಗಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯನ್ನು ಬ್ಯಾಂಕಿನಲ್ಲಿ ಜಾರಿಗೊಳಿಸಲಾಗಿದ್ದು, ಪಿ.ಎಂ.ಜೆ.ಜೆ.ಬಿ.ವೈ ಯೋಜನೆಯಡಿಯಲ್ಲಿ ಕನಿಷ್ಟ 18 ವರ್ಷದಿಂದ ಗರಿಷ್ಟ 50 ವರ್ಷದೊಳಗಿರುವವರು ವಾರ್ಷಿಕವಾಗಿ ರೂ. 33 ಪಾವತಿಸಿ, ಯಾವುದೇ ರೀತಿಯಲ್ಲಿ ಮೃತ ಹೊಂದಿದಲ್ಲಿ ಅವರ ವಾರಸುದಾರರಿಗೆ ರೂ. 2 ಲಕ್ಷ ಕ್ಲೈಂ ದೊರೆಯುತ್ತದೆ ಎಂದರು.

For All Latest Updates

TAGGED:

ABOUT THE AUTHOR

...view details