ಕರ್ನಾಟಕ

karnataka

ETV Bharat / state

ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣ: ಠಾಣೆಗೆ ಬಂದು ಶರಣಾದ ಮೂವರು ಆರೋಪಿಗಳು - etv bharat kannada

ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ಆಗಮಿಸಿ ಶರಣರಾಗಿದ್ದಾರೆ ಎಂದು ಎಸ್​ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

crime-three-accused-surrendered-at-the-police-station-in-rowdy-sheeter-mastigowda-murder-case
ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣ: ಠಾಣೆಗೆ ಬಂದು ಶರಣಾದ ಮೂವರು ಆರೋಪಿಗಳು

By

Published : Jul 10, 2023, 5:49 PM IST

Updated : Jul 10, 2023, 7:32 PM IST

ಎಸ್​ಪಿ ಹರಿರಾಂ ಶಂಕರ್

ಹಾಸನ:ಮೂರು ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ. ಚನ್ನರಾಯಪಟ್ಟಣದ ರೌಡಿಶೀಟರ್ ಹುಲಿವಾಲ ಚೇತು, ಹಾಸನದ ಸಾಲಗಾಮೆ ರಾಕೇಶ್ ಅಲಿಯಾಸ್​ ರಾಕಿ ಮತ್ತು ಮಂಡ್ಯ ಮೂಲದ ಶಿವು, ಶರಣಾದ ಆರೋಪಿಗಳು. ಜೂ.4ರ ಮಂಗಳವಾರ ಐದು ಮಂದಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾಸ್ತಿಗೌಡನನ್ನು ಬರ್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದರು. ಆರೋಪಿಗಳಲ್ಲಿ ಮೂವರು ತಾವಾಗಿಯೇ ಶರಣಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಈ ಕುರಿತು ಹಾಸನ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ನಮ್ಮ ಇಲಾಖೆಯಿಂದ ಬೇರೆ ಬೇರೆ ತಂಡಗಳನ್ನು ಮಾಡಿ ಬೆಂಗಳೂರು ಮತ್ತು ಮಂಗಳೂರು ಹಾಗೂ ಇತರ ಭಾಗಗಳಿಗೆ ಕಳುಹಿಸಲಾಗಿತ್ತು. ಇದರ ಮಧ್ಯೆ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ಆಗಮಿಸಿ ಶರಣರಾಗಿದ್ದಾರೆ. ಚನ್ನರಾಯಪಟ್ಟಣದ ರೌಡಿಶೀಟರ್ ಹುಲಿವಾಲ ಚೇತು, ಹಾಸನದ ಸಾಲಗಾಮೆ ರಾಕೇಶ್ ಅಲಿಯಾಸ್​ ರಾಕಿ ಮತ್ತು ಮಂಡ್ಯ ಮೂಲದ ಶಿವು ಶರಣಾದ ಆರೋಪಿಗಳಾಗಿದ್ದಾರೆ ಎಂದರು.

ಕೊಲೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ, ಪೊಲೀಸರು ನಮ್ಮನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದು ನಾವೇ ಶರಣಾಗುತ್ತಿದ್ದೇವೆ ಎಂದು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಠಾಣೆಯೊಳಗೆ ತೆರಳುವುದನ್ನೂ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಶರಣಾದ ಆರೋಪಿಗಳನ್ನು ಚನ್ನರಾಯಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಸ್ತಿಗೌಡ ಕೊಲೆಗೆ ಇವರೇ ಕಾರಣ ಇರಬಹುದು ಎಂದು ಆತನ ಸಹೋದರಿ ಪಂಕಜಾ ತಮ್ಮ ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ಈ ಹಿನ್ನೆಲೆ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚಿಸಿಕೊಂಡು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದರು. ಮಾಸ್ತಿಗೌಡ ಕೊಲೆಗೆ ಕಲಬುರಗಿ ಜೈಲಿನಲ್ಲಿರುವ ಯಾಚೇನಹಳ್ಳಿ ಚೇತು ಒಳಗಿದ್ದುಕೊಂಡೇ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ. ಇನ್ನು ಮೂರು ಮಂದಿ ಆರೋಪಿಗಳು ಕಳೆದ ತಿಂಗಳು ಕಲಬುರ್ಗಿ ಜೈಲಿನಲ್ಲಿರುವ ಯಾಚೇನಹಳ್ಳಿ ಚೇತುವನ್ನು ಭೇಟಿಯಾಗಿದ್ದು, ಜೊತೆಗೆ ಯಾಚೆನಹಳ್ಳಿ ಚೇತು ದೂರವಾಣಿ ಮೂಲಕ ಮಾತನಾಡಿರುವುದು ಗೊತ್ತಾಗಿದೆ. ಹೀಗಾಗಿ ಈತನನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸುತ್ತೇವೆ ಎಂದರು.

ಇದನ್ನೂ ಓದಿ:ಜೈಲಿಗೆ ಹೋಗಲು ಇಷ್ಟವಿಲ್ಲವೆಂದು ಪೊಲೀಸ್ ಠಾಣೆಯಲ್ಲಿ ಹಲ್ಲಿ ನುಂಗಿ ಆಸ್ಪತ್ರೆ ಸೇರಿದ ಅತ್ಯಾಚಾರದ ಆರೋಪಿ

ಕೆಲಸಕ್ಕಿದ್ದ ಯುವಕನಿಗೆ ಬೆಂಕಿ ಹಚ್ಚಿ ಸುಟ್ಟು ಹತ್ಯೆ:ಮತ್ತೊಂದೆಡೆ, ತನ್ನ ಬಳಿ ಕೆಲಸಕ್ಕಿದ್ದ ಯುವಕನನ್ನು ಬೆಂಕಿ ಹಚ್ಚಿ ಸುಟ್ಟು ಹತ್ಯೆ ಮಾಡಿರುವ ಘಟನೆ ನಗರದ ಮುಳಿಹಿತ್ಲು ಎಂಬಲ್ಲಿ ಶನಿವಾರ ನಡೆದಿತ್ತು. ಗಟ್ಯಾನ್ ಥಿ ಜಗು ಹತ್ಯೆಗೀಡಾದವನು. ಈತನನ್ನು ಪಾಂಡೇಶ್ವರದ ತೌಲಿನ್ ಹಸನ್ (32) ಎಂಬಾತ ಹತ್ಯೆ ಮಾಡಿದ್ದ. ಶನಿವಾರ ಬೆಳಗ್ಗೆ 8:30 ಗಂಟೆಯ ಸುಮಾರಿಗೆ ಮಂಗಳೂರು ನಗರದ ಮುಳಿಹಿತ್ತು ಜಂಕ್ಷನ್​ನಲ್ಲಿರುವ ಮಾಶುಪಾ​ ಜನರಲ್ ಸ್ಟೋರ್ ಎಂಬ ಅಂಗಡಿಯ ಹಿಂಭಾಗ ಕೃತ್ಯ ನಡೆದಿತ್ತು. ತೌಲಿನ್ ಹಸನ್ ತನ್ನೊಂದಿಗೆ ದುಡಿಯುತ್ತಿದ್ದ ಗಟ್ಯಾನ್ ಥಿ ಜಗು ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಬೆಂಕಿ ಕೊಟ್ಟು ಸುಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

Last Updated : Jul 10, 2023, 7:32 PM IST

ABOUT THE AUTHOR

...view details