ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಹಫ್ತಾ ವಸೂಲಿ ದಂಧೆ.. ಹೆಚ್ಚಿನ ಹಣ ಕೊಡಲಿಲ್ಲವೆಂದು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ - etv bharath kannada news

ಹಾಸನದ ಸಿದ್ದಯ್ಯ ನಗರದಲ್ಲಿ ಹೆಚ್ಚಿನ ಹಫ್ತಾ ಹಣ ಕೊಡಲಿಲ್ಲ ಎಂದು ಪುಡಿರೌಡಿಯೊಬ್ಬ ಅಂಗಡಿ ಮಾಲೀಕನಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಸೂರ್ಯಪ್ರಭ
ಹಲ್ಲೆಗೊಳಗಾದ ವ್ಯಕ್ತಿ ಸೂರ್ಯಪ್ರಭ

By

Published : Jul 16, 2023, 9:49 PM IST

ಹಲ್ಲೆಗೊಳಗಾದ ವ್ಯಕ್ತಿ ಸೂರ್ಯಪ್ರಭ

ಹಾಸನ:ಹೆಚ್ಚಿನ ಹಫ್ತಾ ಹಣ ಕೊಡಲಿಲ್ಲ ಅಂತ ಪುಡಿರೌಡಿಯೊಬ್ಬ ಅಂಗಡಿ ಮಾಲೀಕನಿಗೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಹಾಸನದ ಸಿದ್ದಯ್ಯ ನಗರದಲ್ಲಿ ನಡೆದಿದೆ. ಸೂರ್ಯಪ್ರಭ (54) ಹಲ್ಲೆಗೊಳಗಾದ ಪ್ರಭಾ ಆಟೋಮೋಟಿವ್​ ಶಾಪ್ ಮಾಲೀಕ. ಸಿದ್ದಯ್ಯ ನಗರದ ವಿಕ್ಕಿ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಹಲ್ಲೆಗೊಳಗಾದ ಸೂರ್ಯಪ್ರಭ ಆರೋಪಿಸಿದ್ದಾರೆ.

ಭಾನುವಾರ ಸಂಜೆ ಅಂಗಡಿಗೆ ಬಂದ ಆರೋಪಿ ವಿಕ್ಕಿ ಹಫ್ತಾ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದರಿಂದ ಮಾಲೀಕ ಸ್ವಲ್ಪ ಹಣ ಕೊಟ್ಟಿದ್ದಾರೆ. ಆಗ ಸಿಟ್ಟಿಗೆದ್ದಿರುವ ವಿಕ್ಕಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ನಂತರ ಮಾಲೀಕನ ಕಾರಿನಲ್ಲಿ ಪರಾರಿಯಾಗಿಲು ಯತ್ನಿಸಿದ್ದಾನೆ. ಕೊನೆಗೆ ಸ್ಥಳೀಯರು ಆತನನ್ನು ಹಿಡಿದು ಕಾರು ಕಿತ್ತುಕೊಂಡಿದ್ದಾರೆ. ನಂತರ ಅಲ್ಲಿಂದನೂ ಕೂಡ ಆರೋಪಿ ವಿಕ್ಕಿ ಪರಾರಿಯಾಗಿದ್ದಾನೆ.

ತಾಲೂಕು ಕೇಂದ್ರಗಳಲ್ಲೂ ಇಂಥ ಪ್ರಕರಣ ಹೆಚ್ಚಳ :ಗಂಭೀರವಾಗಿ ಗಾಯಗೊಂಡ ಸೂರ್ಯಪ್ರಭ ತಕ್ಷಣ ತುರ್ತು ವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಸನ ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲೂ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಸಿಬ್ಬಂದಿ ಎಷ್ಟೇ ಸನ್ನದ್ಧರಾದರೂ ಅವರ ಕಣ್ತಪ್ಪಿಸಿ ಇಂಥ ಕೃತ್ಯಗಳು ನಡೆಯುತ್ತಿವೆ.

ಈ ಬಗ್ಗೆ ಹಲ್ಲೆಗೊಳಗಾದ ಸೂರ್ಯಪ್ರಭ ಪ್ರತಿಕ್ರಿಯಿಸಿದ್ದು, ರೌಡಿಗಳು ಅಂಗಡಿಗೆ ನುಗ್ಗಿ ಡುಡ್ಡನ್ನು ಕೇಳಿದ್ರು. ಆದ್ರೆ ನಾನು ಅವರಿಗೆ ದುಡ್ಡನ್ನು ಕೊಡಲಿಲ್ಲ. ಅದಕ್ಕೆ ಅಂಗಡಿಯಲ್ಲಿನ ವಸ್ತುಗಳನ್ನು ಎತ್ತಿಕೊಂಡು ಹೋದ್ರು. ಈ ಸಮಯದಲ್ಲಿ ಇಬ್ಬರು ಬಂದಿದ್ರು. ಒಬ್ಬನ ಹೆಸರು ವಿಕ್ಕಿ ಎಂದು. ಇನ್ನೊಬ್ಬನ ಹೆಸರು ಗೊತ್ತಿಲ್ಲ. 10 ರೂ. 50 ರೂ. ವಸೂಲಿ ಮಾಡುತ್ತಿದ್ರು. ಈ ವೇಳೆ ಮತ್ತೆ ಜಾಸ್ತಿ ಕೊಡುವಂತೆ ಕೇಳಿದ್ರು. ನಾನು ನೂರು ರೂಪಾಯಿ ಕೊಟ್ಟೆ. ಆಮೇಲೆ ಜಾಸ್ತಿ ಹಣಕ್ಕಾಗಿ ಕೇಳಿದ್ರು. ಆಮೇಲೆ ವಸ್ತುಗಳನ್ನು ದೋಚಿಕೊಂಡು ಹೋದ್ರು ಎಂದರು.

ಆರೋಪಿಗಳನ್ನ ಶೀಘ್ರ ಪತ್ತೆ ಹಚ್ಚುವ ಭರವಸೆ : ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಲ್ಲೆಗೊಳಗಾದ ಸೂರ್ಯಪ್ರಭ ಅವರ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಆರೋಪಿಗಳನ್ನ ಶೀಘ್ರ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.

ಮೊಬೈಲ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ: ಇನ್ನೊಂದೆಡೆ ಚಾರ್ಜರ್​ ಕೊಟ್ಟಿಲ್ಲವೆಂಬ ಕಾರಣಕ್ಕೆ ಮೊಬೈಲ್ ಅಂಗಡಿ ಸಿಬ್ಬಂದಿಯ ಮೇಲೆ ಪುಡಿರೌಡಿಗಳು ಹಲ್ಲೆ ನಡೆಸಿರುವ ಘಟನೆ (ಜೂನ್​ 30-2023)ಯ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದರು.

ಬೆಂಗಳೂರು ಉತ್ತರ ತಾಲೂಕು ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ಘಟನೆ ನಡೆದಿತ್ತು. ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಜೂನ್ 23 ರಂದು ಮೊಬೈಲ್ ಅಂಗಡಿಗೆ ಬಂದ ಪುಡಿರೌಡಿಯೊಬ್ಬ ಚಾರ್ಜರ್ ಕೇಳಿದ್ದಾನೆ. ಆಗ ಅಂಗಡಿ ಸಿಬ್ಬಂದಿಯು ಮೊತ್ತೊಬ್ಬರು ಚಾರ್ಜಿಂಗ್ ಹಾಕೊಂಡಿದ್ದಾರೆ. ಅನಂತರ ಕೊಡುವುದಾಗಿ ಹೇಳಿದ್ದಾನೆ. ಇಷ್ಟಕ್ಕೆ ಕೆರಳಿದ ಆತ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು.

ಇದನ್ನೂ ಓದಿ:ಚಾರ್ಜರ್​ ಕೊಟ್ಟಿಲ್ಲವೆಂದು ಮೊಬೈಲ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ... ಪುಡಿರೌಡಿ ಬಂಧನ - ವಿಡಿಯೋ

ABOUT THE AUTHOR

...view details