ಕರ್ನಾಟಕ

karnataka

ETV Bharat / state

ಸೋಂಕಿತರ ಮೇಲೆ ಹದ್ದಿನ ಕಣ್ಣಿಟ್ಟು ಸೀಲ್ ಹಾಕಬೇಕು: ಎ.ಟಿ.ರಾಮಸ್ವಾಮಿ - ತಹಶೀಲ್ದಾರ್ ವೈ.ಎಂ.ರೇಣುಕುಮಾರ್

ಅರಕಲಗೂಡು ಪಟ್ಟಣದ ದೊಡ್ಡ ಮಠಾಧೀಶರು ಮತ್ತು ಬಸವಾಪಟ್ಟಣದ ತೋಂಟದಾರ್ಯ ಮಠಾಧೀಶರು ತಮ್ಮ ಮಠಗಳಲ್ಲಿನ ಕೊಠಡಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿಸಿ, ಸೋಂಕಿತರು ಉಳಿದುಕೊಳ್ಳಲು ಪ್ರತ್ಯೇಕವಾಗಿ ವಸತಿ ಮತ್ತು ಊಟದ ಸೌಲಭ್ಯ ಒದಗಿಸಲು ಮುಂದೆ ಬಂದಿದ್ದಾರೆ. ವಸತಿ ಸಮಸ್ಯೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

arakalagudu
ಶಾಸಕ ಎ.ಟಿ.ರಾಮಸ್ವಾಮಿ

By

Published : May 12, 2021, 8:52 AM IST

ಅರಕಲಗೂಡು (ಹಾಸನ):ಕೋವಿಡ್ ಕಾರ್ಯಪಡೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸಬೇಕು. ಸೋಂಕಿತರಿಗೆ ಸೀಲ್ ಹಾಕಬೇಕು. ಮನೆಯಿಂದ ಹೊರ ಬಂದು ಸುತ್ತಾಡುವ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಸೂಚಿಸಿದರು.

ಎ.ಟಿ.ರಾಮಸ್ವಾಮಿ, ಶಾಸಕ

ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಕಸಬಾ ಮತ್ತು ದೊಡ್ಡಮಗ್ಗೆ ಹೋಬಳಿಯ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್ ಆದೇಶದಲ್ಲಿ ಕೃಷಿ ಸಂಬಂಧಿತ ವಸ್ತುಗಳ ಸಾಗಣೆ ಮೇಲೆ ನಿರ್ಬಂಧ ವಿಧಿಸುವುದಿಲ್ಲವೆಂದು ಘೋಷಣೆ ಮಾಡಿದ್ದ ಸರ್ಕಾರ, ಏಕಾಏಕಿ ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ರೈತರ ಓಡಾಟಕ್ಕೆ ತೊಂದರೆಯಾಗಿದೆ ಎಂದರು.

ಇನ್ನು ಕೋವಿಡ್ ಕಾರ್ಯಪಡೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸಬೇಕು. ಸೋಂಕಿತರಿಗೆ ಸೀಲ್ ಹಾಕಬೇಕು. ಮನೆಯಿಂದ ಹೊರ ಬಂದು ಸುತ್ತಾಡುವ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 70 ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಲಭಿಸುತ್ತಿದೆ. ಪಟ್ಟಣದ ದೊಡ್ಡ ಮಠಾಧೀಶರು ಮತ್ತು ಬಸವಾಪಟ್ಟಣದ ತೋಂಟದಾರ್ಯ ಮಠಾಧೀಶರು ತಮ್ಮ ಮಠಗಳಲ್ಲಿನ ಕೊಠಡಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿಸಿ, ಸೋಂಕಿತರು ಉಳಿದುಕೊಳ್ಳಲು ಪ್ರತ್ಯೇಕವಾಗಿ ವಸತಿ ಮತ್ತು ಊಟದ ಸೌಲಭ್ಯ ಒದಗಿಸಲು ಮುಂದೆ ಬಂದಿದ್ದಾರೆ. ವಸತಿ ಸಮಸ್ಯೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಕೋವಿಡ್ ರೋಗಿಗಳು ಮನೆಯಿಂದ ಹೊರ ಬಂದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಗ್ರಾಮ ಮಂಚಾಯಿತಿ ಪಿಡಿಒಗಳಿಗೆ ಸೂಚಿಸಿದರು.

ಓದಿ:ಕೋವಿಡ್​ ನಿರ್ವಹಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಜನ ದಂಗೆ ಏಳುತ್ತಾರೆ: ಶಾಸಕ ರೇವಣ್ಣ

ABOUT THE AUTHOR

...view details