ಕರ್ನಾಟಕ

karnataka

ETV Bharat / state

ಕೋವಿಡ್​ ರೋಗಿಗಳ ಕುಟುಂಬಸ್ಥರಿಗೆ ಸ್ಥಳೀಯರ ಕಿರುಕುಳ.. ವಿಡಿಯೋ ಮಾಡಿ ಕಣ್ಣೀರಿಟ್ಟ ಮಹಿಳೆಯರು - ಕೊರೊನಾ ಸಾವು

ದೂರು ಕೊಡಲು ಅರಕಲಗೂಡು ಠಾಣೆಗೆ ಹೋದರೆ ದೂರನ್ನು ಸ್ವೀಕರಿಸುತ್ತಿಲ್ಲ, ನೀವು ಕುಳಿತುಕೊಂಡು ರಾಜಿ ಮಾಡಿಕೊಳ್ಳಿ ಎಂದು ಹಿಂತಿರುಗಿ ಕಳುಹಿಸಿದ್ದಾರೆ. ನಮಗೆ ರಕ್ಷಣೆ ನೀಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕೋವಿಡ್​ ರೋಗಿಗಳ ಕುಟುಂಬಸ್ಥರಿಗೆ ಸ್ಥಳೀಯರಿಂದ ಕಿರುಕುಳ
ಕೋವಿಡ್​ ರೋಗಿಗಳ ಕುಟುಂಬಸ್ಥರಿಗೆ ಸ್ಥಳೀಯರಿಂದ ಕಿರುಕುಳ

By

Published : May 25, 2021, 7:49 PM IST

ಅರಕಲಗೂಡು (ಹಾಸನ): ಕೋವಿಡ್ ಕೇರ್ ಸೆಂಟರ್​​​​​ಗೆ ದಾಖಲಾಗಿರುವ ರೋಗಿಗಳ ಕುಟುಂಬಸ್ಥರಿಗೆ ಗ್ರಾಮಸ್ಥರು ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಅರಕಲಗೋಡು ತಾಲೂಕಿನ ಹೆಚ್​​​ಆರ್​​​ಪಿ ವಡ್ಡರಹಳ್ಳಿ ಗ್ರಾಮದ ಮಹಿಳೆಯರು ಈ ಕುರಿತು ವಿಡಿಯೋ ಮೂಲಕ ಆರೋಪಿಸಿದ್ದಾರೆ.

ಗ್ರಾಮದ ವಿವಿಧ ಮನೆಯ ಐವರು ಪುರುಷರಿಗೆ ಕೋವಿಡ್ ದೃಢವಾಗಿದ್ದ ಹಿನ್ನೆಲೆ ಅವರೆಲ್ಲ ಕೋವಿಡ್ ಸೆಂಟರ್​​ಗೆ ದಾಖಲಾಗಿದ್ದರು. ಈ ವೇಳೆ, ಗ್ರಾಮದಲ್ಲಿ ರೋಗಿಯ ಕುಟುಂಬದಲ್ಲಿರುವ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದು, ಮನೆಯಿಂದ ಹೊರಬಾರದಂತೆ ತಾಕೀತು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ವಿಡಿಯೋದಲ್ಲಿ ಆರೋಪಿಸಿದ್ದಾರೆ.

ಕೋವಿಡ್​ ರೋಗಿಗಳ ಕುಟುಂಬಸ್ಥರಿಗೆ ಸ್ಥಳೀಯರಿಂದ ಕಿರುಕುಳ ಆರೋಪ

ನಮಗೆ ಅಗತ್ಯ ವಸ್ತುಗಳ ಖರೀದಿಗೂ ಹೊರ ಹೋಗಲು ಆಗುತ್ತಿಲ್ಲ. ಸರ್ಕಾರದಿಂದಲೂ ನಮಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ ನಾವು ಊಟ ತಿಂಡಿಗೆ ಏನು ಮಾಡಬೇಕು ಎಂದು ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ದೂರು ಕೊಡಲು ಅರಕಲಗೂಡು ಠಾಣೆಗೆ ಹೋದರೆ ದೂರು ಸ್ವೀಕರಿಸುತ್ತಿಲ್ಲ, ನೀವು ಕುಳಿತುಕೊಂಡು ರಾಜಿ ಮಾಡಿಕೊಳ್ಳಿ ಎಂದು ಹಿಂತಿರುಗಿ ಕಳುಹಿಸಿದ್ದಾರೆ. ನಮಗೆ ರಕ್ಷಣೆ ನೀಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಓದಿ:ದಮ್ಮೂರು ಕಗ್ಗಲ್ ಮೌಢ್ಯಾಚರಣೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಿ: ಆಗ್ರಹ

ABOUT THE AUTHOR

...view details