ಕರ್ನಾಟಕ

karnataka

ETV Bharat / state

ಹೇಮಾವತಿ‌ ನದಿಯಲ್ಲಿ ನವದಂಪತಿ ನೀರುಪಾಲು: ಪತ್ನಿಯ ಶವ ಪತ್ತೆ! - ಮದುವೆ ಆಮಂತ್ರಣ ಪತ್ರಿಕೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ‌ಲ್ಲಿ ತಿರುಗಾಡಲು ಹೋಗಿದ್ದ ನವದಂಪತಿ ಆಕಸ್ಮಿಕವಾಗಿ ನದಿಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಪತ್ನಿಯ ಶವ ಸಿಕ್ಕಿದ್ದು, ಪತಿಯ ಕುರಿತು ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

Couple drowns in Hemavathi river
ಕೃತಿಕಾ (23)

By

Published : May 7, 2020, 11:55 PM IST

Updated : May 8, 2020, 10:34 AM IST

ಸಕಲೇಶಪುರ (ಹಾಸನ): ತಾಲೂಕಿನ‌ ಹೆನ್ನಲಿ ಗ್ರಾಮದ ಸಮೀಪ ಪತಿಯ ಜೊತೆ ತಿರುಗಾಡಲು ಹೋಗಿದ್ದ ಪತ್ನಿ ಆಕಸ್ಮಿಕವಾಗಿ ಹೇಮಾವತಿ ನದಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ಕೃತಿಕಾ (23)

ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್​​ಡೌನ್ ಹಿನ್ನೆಲೆ ತನ್ನ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮಕ್ಕೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಂದಿದ್ದನಂತೆ.

ಅರ್ಥೇಶ್ (27)

ಬುಧವಾರ ಹೆನ್ನಲಿ ಗ್ರಾಮದಲ್ಲಿರುವ ತನ್ನ ಹೆಂಡತಿ ಮನೆಗೆ ತೆರಳಿದ್ದು, ಅಲ್ಲಿ ತಿರುಗಾಡಲೆಂದು ಬೈಕ್​ ಸಮೇತ ಇಬ್ಬರೂ ಹೊರ ಹೋಗಿದ್ದರಂತೆ. ಆದರೆ ಕೆಲ ಗಂಟೆಗಳ ಕಾಲ ಕಳೆದರೂ ಮನೆಗೆ ಬಾರದಿರುವುದನ್ನು ಕಂಡು ವಿಚಾರಿಸಲೆಂದು ಫೋನ್ ಮಾಡಿದ್ದಾರೆ. ಎರಡೂ ಫೋನ್​ಗಳು ಸ್ವಿಚ್​​ ಆಫ್​ ಬಂದಿದ್ದರಿಂದ ಭಯಗೊಂಡು ಮನೆಯವರು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್​ ಕಾಣಿಸಿದ್ದು, ಅಲ್ಲೇ ಪಕ್ಕದಲ್ಲಿದ್ದ ಮೀನುಗಾರರಿಂದ ನದಿಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಬಲೆಗೆ ಕೃತಿಕಾ ಶವ ಸಿಕ್ಕಿದ್ದು, ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣೆ ಪೋಲಿಸರು ಶವವನ್ನು ಹೊರ ತೆಗೆದು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆ

ಇನ್ನು ಕತ್ತಲಾಗಿದ್ದರಿಂದ ಅರ್ಥೇಶ್ ಕುರಿತು ಮಾಹಿತಿ ತಿಳಿದು ಬಂದಿಲ್ಲ. ಆರ್ಥೇಶ್ ಸಹ ನೀರಲ್ಲಿ ಮುಳುಗಿದ್ದಾನೆಂದು ಹೇಳಲಾಗುತ್ತಿದ್ದು, ಶುಕ್ರವಾರ ಮುಂಜಾನೆ ಶೋಧ ಕಾರ್ಯಾಚರಣೆ ನಡೆಯಲಿದೆ. ನಗರ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಮೇಲ್ನೋಟಕ್ಕೆ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ತನಿಖೆಯ ಬಳಿಕ ಸತ್ಯಾಂಶ ತಿಳಿದು ಬರಲಿದೆ.

Last Updated : May 8, 2020, 10:34 AM IST

ABOUT THE AUTHOR

...view details