ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಶಿಕ್ಷಕರ ಬಡ್ತಿ ಹಿನ್ನೆಲೆಯಲ್ಲಿ ಕೌನ್ಸಲಿಂಗ್ - ಹಾಸನ ಶಿಕ್ಷಕರ ಕೌನ್ಸ್​​ಲಿಂಗ್​

ಹಾಸನದ ಡಿಡಿಪಿಐ ಕಚೇರಿ ಎದುರು ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಬಡ್ತಿ ನೀಡಲು ಇಂದು ಕೌನ್ಸ್​ಲಿಂಗ್​ ನಡೆಸಲಾಯಿತು.

Counseling for Teacher Promotion in Hassan
ಹಾಸನದಲ್ಲಿ ಶಿಕ್ಷಕರ ಬಡ್ತಿಗೆ ಕೌನ್ಸಲಿಂಗ್​

By

Published : Sep 12, 2020, 11:18 PM IST

ಹಾಸನ: ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಬಡ್ತಿ ಹಿನ್ನೆಲೆಯಲ್ಲಿ ಕೌನ್ಸಲಿಂಗ್‌ ಅನ್ನು ಶನಿವಾರ ನಡೆಸಲಾಯಿತು.

ಹಾಸನದಲ್ಲಿ ಶಿಕ್ಷಕರ ಬಡ್ತಿಗೆ ಕೌನ್ಸಲಿಂಗ್​

ಈಗಾಗಲೇ 1ರಿಂದ 7ನೇ ತರಗತಿಯವರೆಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿರುವವರನ್ನು 8ರಿಂದ 10ನೇ ತರಗತಿಗೆ ಪ್ರಮೋಷನ್ ನೀಡುವ ನಿಟ್ಟಿನಲ್ಲಿ ಈ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯ ಎಲ್ಲಾ ತಾಲೂಕಿನ ಶಿಕ್ಷಕರು ಬೆಳಗಿನಿಂದಲೇ ಡಿಡಿಪಿಐ ಕಚೇರಿ ಎದುರು, ರಸ್ತೆಯಲ್ಲಿ ಕೌನ್ಸಲಿಂಗ್​ಗಾಗಿ ಕಾಯುತ್ತಿದ್ದರು. ಎಲ್ಲಾ ವಿಷಯದ ಶಿಕ್ಷಕರಿಗೆ ಬಡ್ತಿ ನೀಡಲಾಗುತ್ತಿದ್ದು, ಹಿಂದಿ ಭಾಷಾ ಶಿಕ್ಷಕರಿಗೆ ಮಾತ್ರ ಬಡ್ತಿ ನೀಡಲು ಕೌನ್ಸಲಿಂಗ್​ ಕರೆದಿರಲಿಲ್ಲ. ನಮಗೂ ಕೌನ್ಸಲಿಂಗ್​ಗೆ ಅವಕಾಶ ನೀಡುವಂತೆ ಹಿಂದಿ ಶಿಕ್ಷಕರು ಇದೇ ವೇಳೆ ಮನವಿ ಮಾಡಿದರು.

ABOUT THE AUTHOR

...view details