ಸಕಲೇಶಪುರ :ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕೂಡಲೇ ಗೌರವ ಧನ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರಿಂದ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಗೌರವ ಧನ ಹಾಗೂ ದಿನ ಭತ್ಯೆ ಸಿಗುತ್ತಿಲ್ಲ ಎಂಬ ದೂರನ್ನು ಕೊಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರು ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ₹3 ಸಾವಿರ ವಿಶೇಷ ಭತ್ಯೆ ನೀಡಿದೆ. ಆದರೆ, ಅದು 22 ಜನರಿಗೆ ಮಾತ್ರ ತಲುಪಿದೆ ಎಂದರು.