ಹಾಸನ:ಹಾಸನದ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಕೊರೊನಾಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಲಾಕ್ಡೌನ್ ಸಂದರ್ಭದಲ್ಲಿ ಫ್ರಂಟ್ ವಾರಿಯರ್ಸ್ಗೆ ಇಂದಿನಿಂದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯಧಿಕಾರಿ ಡಾ. ಸತೀಶ್ ಮತ್ತು ಹಿಮ್ಸ್ ಆಸ್ಪತ್ರೆಯ ನಿರ್ದೇಶಕ ರವಿಕುಮಾರ್ ಚಾಲನೆ ನೀಡಿದರು.
ಹಾಸನದಲ್ಲಿ ಇಂದು 10 ಕೇಂದ್ರಗಳಿಗೆ ಕೋವಿಶೀಲ್ಡ್ ಲಸಿಕೆ ರವಾನೆಯಾಗಿದೆ. ಆದರೆ , ಐದು ಕಡೆ ತಾಂತ್ರಿಕ ದೋಷದಿಂದ ಇನ್ನೂ ಆರಂಭವಾಗಿಲ್ಲ. ಇನ್ನು ವ್ಯಾಕ್ಸಿನೇಷನ್ ಆರಂಭವಾಗಿರುವ ಪ್ರತೀ ಕೇಂದ್ರದಲ್ಲಿ 100 ಮಂದಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ.
ಇನ್ನು ಹಿಮ್ಸ್ನ ಡಿ ಗ್ರೂಪ್ ನೌಕರ ಯಶ್ವಂತ್ಗೆ ಮೊದಲ ಕೋವ್ಯಾಕ್ಸಿನ್ ನೀಡಿದ್ರೆ, ಡಾ. ಶ್ರೀರಂಗ ಮೊದಲ ಲಸಿಕೆ ಹಾಕಿಸಿಕೊಂಡ ವೈದ್ಯರಾಗಿದ್ದಾರೆ. ಡಿ - ಗ್ರೂಪ್ ನೌಕರರಿಗೆ ಮತ್ತು ವೈದ್ಯರಿಗೆ ಚುಚ್ಚುಮದ್ದು ನೀಡಿದ ಬಳಿಕ ಮೆಡಿಕಲ್ ವಿದ್ಯಾರ್ಥಿಗಳಿಗೂ ಉಳಿದ ವೈದ್ಯರಿಗೂ ಕೋವ್ಯಾಕ್ಸಿನೇಷನ್ ಆರಂಭವಾಗಿದೆ.