ಕರ್ನಾಟಕ

karnataka

ಹಾಸನ ಜಿಲ್ಲೆಯಲ್ಲಿ 467 ಜನರಿಗೆ ಕೊರೊನಾ ದೃಢ, ನಾಲ್ವರು ಸಾವು

By

Published : Apr 22, 2021, 7:20 AM IST

ಜಿಲ್ಲೆಯಲ್ಲಿ ಕೋವಿಡ್​ ಸೋಂಕು ನಿಯಂತ್ರಿಸಲು ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರ ತನಕ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಮಾಸ್ಕ್​ ಹಾಕದವರಿಗೆ 100 ರೂ. ದಂಡ ವಿಧಿಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್​.ಗಿರೀಶ್​ ತಿಳಿಸಿದ್ದಾರೆ.

Hassan Corona Case
ಜಿಲ್ಲಾಧಿಕಾರಿ ಆರ್​. ಗಿರೀಶ್

ಹಾಸನ:ರಾಜ್ಯದಲ್ಲಿ ‌ಕೊರೊನಾ‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜಿಲ್ಲೆಯಲ್ಲಿ ಬುಧವಾರ 467 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ತೀವ್ರ ನಿಗಾ ಘಟಕದಲ್ಲಿದ್ದ ನಾಲ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಜಿಲ್ಲಾಧಿಕಾರಿ ಆರ್​. ಗಿರೀಶ್ ಸುದ್ದಿಗೋಷ್ಟಿ

ಆಲೂರು ತಾಲೂಕಿನಲ್ಲಿ 25, ಅರಕಲಗೂಡು 23, ಅರಸೀಕೆರೆ 38, ಬೇಲೂರು 3, ಚನ್ನರಾಯಪಟ್ಟಣ 83, ಹಾಸನ 169, ಹೊಳೆನರಸೀಪುರ 60, ಸಕಲೇಶಪುರ 25 ಹಾಗೂ ಇತರೆ ಜಿಲ್ಲೆಯ ಏಳು ಮಂದಿಗೆ ಸೋಂಕು ತಗುಲಿದೆ.

ಸದ್ಯ ಜಿಲ್ಲೆಯಲ್ಲಿ 2,524 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 24 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 508 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಸೋಂಕು ನಿಯಂತ್ರಿಸಲು ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರ ತನಕ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಮಾಸ್ಕ್​ ಹಾಕದವರಿಗೆ 100 ರೂ. ದಂಡ ವಿಧಿಸಿ, ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್​.ಗಿರೀಶ್​ ತಿಳಿಸಿದ್ದಾರೆ.

ಓದಿ:ಫುಟ್‌ಪಾತ್​ನಲ್ಲಿ ವಾಹನ ನಿಲ್ಲಿಸಿದರೆ ಕಠಿಣ ಕ್ರಮ ಜರುಗಿಸಿ: ಹೈಕೋರ್ಟ್

ABOUT THE AUTHOR

...view details