ಕರ್ನಾಟಕ

karnataka

ETV Bharat / state

ಹಾಸನದಲ್ಲಿಂದು 358 ಜನರಿಗೆ ಕೊರೊನಾ, 167 ಮಂದಿ ಗುಣಮುಖ

ಹಾಸನ ಜಿಲ್ಲೆಯಲ್ಲಿಂದು ಬರೋಬ್ಬರಿ 358 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 167 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

By

Published : Aug 28, 2020, 7:56 PM IST

Corona positive for 358 people in Hassan district
ಹಾಸನದಲ್ಲಿಂದು ಬರೋಬ್ಬರಿ 358 ಜನರಿಗೆ ಕೊರೊನಾ..167 ಮಂದಿ ಗುಣಮುಖ

ಹಾಸನ:ಜಿಲ್ಲೆಯಲ್ಲಿಂದು ಬರೋಬ್ಬರಿ 358 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7,214ಕ್ಕೆ ಏರಿಕೆಯಾಗಿದೆ ಎಂದು ಪ್ರಭಾರಿ ಆರೋಗ್ಯಾಧಿಕಾರಿ ಡಾ.ಕಾಂತರಾಜ್​ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಇಂದು ಆಲೂರು-7, ಅರಕಲಗೂಡು-66, ಅರಸೀಕೆರೆ 50, ಬೇಲೂರು 41, ಚನ್ನರಾಯಪಟ್ಟಣ 36, ಹಾಸನ 130, ಹೊಳೆನರಸೀಪುರ 17, ಸಕಲೇಶಪುರ-7, ಇತರೆ 4 ಪ್ರಕರಣಗಳು ದಾಖಲಾಗಿವೆ. ಇಬ್ಬರು ಕೊರೊನಾಕ್ಕೆ ಬಲಿಯಾಗಿದ್ದು, ಮೃತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.

ಜೊತೆಗೆ 167 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್‌​ ಆಗಿದ್ದು, ಈವರೆಗೆ ಒಟ್ಟು 4,782 ಜನರು ಗುಣಮುಖರಾಗಿದ್ದಾರೆ. 2,255 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 57 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ತಾಲೂಕುವಾರು ಒಟ್ಟು ಸೋಂಕಿತರು:

ಆಲೂರು 208, ಅರಕಲಗೂಡು 680, ಅರಸೀಕೆರೆ 989, ಬೇಲೂರು 581, ಚನ್ನರಾಯಪಟ್ಟಣ 959, ಹಾಸನ 2,902, ಹೊಳೆನರಸೀಪುರ 644, ಸಕಲೇಶಪುರ 202 ಹಾಗೂ ಇತರೆ 49 ಪ್ರಕರಣಗಳು ಪತ್ತೆಯಾಗಿವೆ.

ABOUT THE AUTHOR

...view details