ಕರ್ನಾಟಕ

karnataka

ETV Bharat / state

ಹಾಸನ: ಲಾಕ್​ಡೌನ್​ ಧಿಕ್ಕರಿಸಿ ರಸ್ತೆಗಿಳಿದ ವಾಹನಗಳು ಸೀಜ್​ - ಪೊಲೀಸ್ ಇಲಾಖೆ

ಲಾಕ್​ಡೌನ್ ಹಿನ್ನೆಲೆ ಕೆಲವು ಆಯ್ದ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಆದರೆ, ಕೆಲವರು ಲಾಕ್​ಡೌನ್​ ಆದೇಶ ಗಾಳಿಗೆ ತೂರಿ ಅನಗತ್ಯವಾಗಿ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾರೆ.

Corona: police Seized vehicles in hassan those who came between lockdown
ಕೊರೊನಾ: ಲಾಕ್​ಡೌನ್​ ಧಿಕ್ಕರಿಸಿ ರಸ್ತೆಗಿಳಿದ ವಾಹನಗಳನ್ನು ಸೀಜ್​ ಮಾಡಿದ ಪೊಲೀಸರು

By

Published : Apr 8, 2020, 5:27 PM IST

ಹಾಸನ: ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್​​ಡೌನ್ ಜಾರಿ ಮಾಡಲಾಗಿದೆ. ಇದರಿಂದ ಯಾರೂ ಮನೆಯಿಂದ ಹೊರ ಬರದೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಕೆಲವು ಆಯ್ದ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಆದರೆ ಕೆಲವರು ಲಾಕ್​ಡೌನ್​ ಆದೇಶ ಗಾಳಿಗೆ ತೂರಿ ಅನಗತ್ಯವಾಗಿ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾರೆ.

ಈ ಹಿನ್ನೆಲೆ ಇಂದು ಹಾಸನದ ಪ್ರಮುಖ ರಸ್ತೆಯಲ್ಲಿ ವಾಹನ ಸವಾರರನ್ನು ಪೊಲೀಸರು ತಡೆದರು. ಎಸ್‌ಪಿ ನಂದಿನಿ ಬುಧವಾರ ಒಂದೇ ದಿನ ನೂರಾರು ವಾಹನಗಳನ್ನು ಸೀಜ್ ಮಾಡಿದ್ದಾರೆ.

ಸಾರ್ವಜನಿಕರಿಗೆ ಯಾವ ತೊಂದರೆಯಾಗಬಾರದು ಎಂದು ಜಿಲ್ಲಾಡಳಿತ ನಗರದ ನಾಲ್ಕು ಕಡೆಗಳಲ್ಲಿ ವಾರದ ನಾಲ್ಕು ದಿವಸ ತರಕಾರಿ ಮತ್ತು ಹಣ್ಣುಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಿದೆ. ಜೊತೆಗೆ ರೈತರಿಂದ ನೇರವಾಗಿ ಖರೀದಿ ಮಾಡಿದ ತರಕಾರಿಯನ್ನು ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದೆ. ಇಷ್ಟೆಲ್ಲಾ ಸೌಲಭ್ಯ ಕೊಡುತ್ತಿದ್ದರೂ ಹೊರಗೆ ಜನರು ಓಡಾಡುತ್ತಾರೆ. ವಾಹನಗಳಲ್ಲಿ ಸಂಚರಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ದಿಟ್ಟ ಕ್ರಮಕ್ಕೆ ಮುಂದಾಗಿದೆ.

ವಾಹನವನ್ನು ರಸ್ತೆಗಿಳಿಸಬೇಕಾದರೆ ಮೊದಲೇ ಜಿಲ್ಲಾಡಳಿತ ಇಲ್ಲವೇ ಪೊಲೀಸ್ ಇಲಾಖೆಯಿಂದ ಅಧಿಕೃತ ಅನುಮತಿ ಪತ್ರ ಪಡೆದಿರಬೇಕು. ಇಲ್ಲಸಲ್ಲದ ಕಾರಣ ಹೇಳಿದರೆ ವಾಹನ ಮನೆಗೆ ವಾಪಸ್ ಬರುವುದಿಲ್ಲ. ಸೀದಾ ಪೊಲೀಸ್ ಠಾಣೆಗೆ ಹೋಗುತ್ತದೆ. ಲಾಕ್​ಡೌನ್ ಮುಗಿಯುವವರೆಗೂ ನಿಮಗೆ ವಾಹನ ಸಿಗುವುದಿಲ್ಲ. ಬುಧವಾರ ಖುದ್ದಾಗಿ ಎಸ್​ಪಿ ಮತ್ತು ಎಎಸ್​​ಪಿಯವರೇ ರಸ್ತೆಯಲ್ಲಿ ನಿಂತು ವಾಹನಗಳನ್ನು ಸೀಜ್ ಮಾಡುವ ಮೂಲಕ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ABOUT THE AUTHOR

...view details