ಹಾಸನ: ಜಿಲ್ಲೆಯಲ್ಲಿ 15 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 15 ಜನರಲ್ಲಿ ಕೊರೊನಾ ಸೋಂಕು ದೃಢ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 397ಕ್ಕೆ ಏರಿಕೆಯಾಗಿದೆ. ಇಂದಿನ 15 ಜನ ಸೋಂಕಿತರಲ್ಲಿ ಹೊಳೆನರಸೀಪುರ ತಾಲೂಕಿನ 11 ಮಂದಿ, ಒಬ್ಬರು ಚನ್ನರಾಯಪಟ್ಟಣ ತಾಲೂಕು ಹಾಗೂ 3 ಜನ ಹಾಸನ ತಾಲೂಕಿಗೆ ಸೇರಿದವರಾಗಿದ್ದಾರೆ ಎಂದರು. ಕೊರೊನಾ ಸೋಂಕಿತರಲ್ಲಿ ಇದುವರೆಗೂ 276 ಜನರು ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಕೊವೀಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 148 ಮಂದಿ ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಸಾರ್ವಜನಿಕರಲ್ಲಿ ಹೆಚ್ಚಿನ ಸಂಪರ್ಕದಲ್ಲಿರುವಂತಹ ಸವಿತ ಸಮಾಜದವರು ಹಾಗೂ ಮೆಡಿಕಲ್ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇಂದು ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ 4 ಮಂದಿ ಪೊಲೀಸರಿದ್ದು, ಒಬ್ಬರು ಹೊಳೆನರಸೀಪುರ ತಾಲೂಕಿಗೆ ಸೇರಿದವರಾಗಿದ್ದಾರೆ. ಇನ್ನುಳಿದ ಮೂರು ಮಂದಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಾಲೂಕುವಾರು ವಿವರ:
1.ಅರಸೀಕೆರೆ - 29
2.ಅರಕಲಗೂಡು - 19
3.ಆಲೂರು - 18
4.ಬೇಲೂರು - 8
5.ಚನ್ನರಾಯಪಟ್ಟಣ - 207
6.ಹೊಳೆನರಸೀಪುರ - 65
7.ಹಾಸನ - 47
8.ಸಕಲೇಶಪು - 0
9.ಇತರೆ ಜಿಲ್ಲೆ - 4
ಒಟ್ಟು ಇದುವರೆಗೂ 397 ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.