ಕರ್ನಾಟಕ

karnataka

ETV Bharat / state

ಎಲೆಕೋಸಿಗಿಲ್ಲ ಸೂಕ್ತ ಬೆಲೆ: ಬೆಳೆ ನಾಶ ಮಾಡಿದ ರೈತ - arakalagoodu hasana latest news

ಲಾಕ್​​ಡೌನ್​​ ಹಿನ್ನೆಲೆ ರೈತರು ಬೆಳೆದ ಬೆಲೆಗೆ ಉತ್ತಮ ಬೆಲೆ ಸಿಗದ ಕಾರಣ ಸಾಕಷ್ಟು ರೈತರು ತಾವು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ. ಸದ್ಯ ಮಣಜೂರು ಗ್ರಾಮದ ಗ್ರಾಮದ ರೈತ ಎಂ.ಬಿ.ಆನಂದ್​ ಎಂಬುವವರು ತಾವು ಬೆಳೆದ ಬೆಳೆಯನ್ನು ನಾಶಪಡಿಸಿದ್ದಾರೆ.

Corona effects: farmer destroyed crops in hasan
ಎಲೆಕೋಸಿಗಿಲ್ಲ ಸೂಕ್ತ ಬೆಲೆ: ತಾನು ಬೆಳೆದ ಬೆಳೆಯನ್ನು ಸ್ವತಃ ನಾಶಪಡಿಸಿದ ರೈತ

By

Published : May 22, 2020, 1:12 PM IST

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮಣಜೂರು ಗ್ರಾಮದ ರೈತರೋರ್ವರು ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಹಿನ್ನೆಲೆ ಬೆಳೆದ ಎಲೆಕೋಸು ಬೆಳೆಯನ್ನು ನಾಶಪಡಿಸಿದ್ದಾರೆ.

ಗ್ರಾಮದ ರೈತ ಎಂ.ಬಿ.ಆನಂದ್​ ಎಂಬುವವರು ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕೋಸು ಉತ್ತಮವಾಗಿ ಫಸಲು ಬಿಟ್ಟಿತ್ತು. ಲಾಕ್​ಡೌನ್ ಪರಿಣಾಮ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ ಮನನೊಂದು ಚೆನ್ನಾಗಿ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್​​ (ರೋಟರ್​ ಯಂತ್ರ) ಮೂಲಕ ನಾಶಪಡಿಸಿದ್ದಾರೆ.

ಬೆಳೆ ನಾಶಪಡಿಸಿದ ರೈತ

ಫೆಬ್ರವರಿ ತಿಂಗಳಲ್ಲಿ ಬೆಳೆ ಬಿತ್ತಿ ನೀರು ಹಾಯಿಸಿದ್ದು, ಕೋಸು ಸಮೃದ್ಧಿಯಾಗಿ ಬಂದಿತ್ತು. ಬೆವರು ಸುರಿಸಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಬೆಳೆದ ಕೋಸನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಗಿದ್ದಾರೆ. ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದ ವೆಚ್ಚವೂ ಕೈಸೇರದಾಗಿ ಕೈ ಸುಟ್ಟುಕೊಳ್ಳುವಂತಾಗಿದೆ. ಸರ್ಕಾರ ಪರಿಹಾರ ಒದಗಿಸಿ ಬೆಳೆ‌ ನಷ್ಟ ಭರಿಸಿದರೆ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯ ಎಂದು ರೈತ‌ ಆನಂದ್ ಹೇಳಿದರು.

ತಾಲೂಕಿನಲ್ಲಿ ಕಳೆದೊಂದು ತಿಂಗಳಿನಿಂದ ಬಹಳಷ್ಟು ರೈತರು ಬೆಲೆ‌ ಕಾಣದೆ ಬೆಳೆದ ಬೆಳೆಯನ್ನೇ ನಾಶಪಡಿಸಿದ್ದಾರೆ. ಯಗಟಿಯಲ್ಲಿ ರೈತರು ಕೋಸು ಬೆಳೆಗೆ ಕುರಿ ಮಂದೆ ಬಿಟ್ಟು ಮೇಯಿಸಿದ್ದರು. ಮದಲಾಪುರ ಗ್ರಾಮದ ರೈತ ಎಂ.ಆರ್.ರಂಗಸ್ವಾಮಿ ಮೆಣಸಿನಕಾಯಿ ಬೆಳೆಯನ್ನು ರೋಟರಿ ಹೊಡೆಸಿ ನಾಶಪಡಿಸಿದ್ದರು. ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಬಿಟ್ಟರೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ ಎಂಬುದು ರೈತರ ಅಳಲಾಗಿದೆ.

ABOUT THE AUTHOR

...view details