ಕರ್ನಾಟಕ

karnataka

ETV Bharat / state

ಕುಕ್ಕುಟೋದ್ಯಮ ಕುಸಿಯಲು ಕಾರಣವಾಯ್ತು ಕೊರೊನಾ ಸುಳಿ...15 ರೂ.ಗೆ ಇಳಿದ ಕೆ.ಜಿ. ಕೋಳಿ​ - ಕುಕ್ಕುಟೋದ್ಯಮಕ್ಕೆ ‘ಕೊರೊನಾ’ ಹೊಡೆತ

ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ಕೊರೊನಾ, ರಾಜ್ಯದ ಕುಕ್ಕುಟೋದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಇದ್ರಿಂದಾಗಿ ಉದ್ಯಮಿಗಳು ಕಂಗಾಲಾಗಿದ್ದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

KN_HSN_02_17_CORONA_VIRUS_SPECIAL_PKG_KA10026
ಕುಕ್ಕುಟೋದ್ಯಮಕ್ಕೆ ‘ಕೊರೊನಾ’ ಹೊಡೆತ

By

Published : Mar 18, 2020, 1:32 PM IST

ಹಾಸನ: ಜಗತ್ತಿನ ಬಹುತೇಕ ರಾಷ್ಟ್ರಗಳ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ಕೊರೊನಾ, ರಾಜ್ಯದ ಕುಕ್ಕುಟೋದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಇದರಿಂದಾಗಿ ಉದ್ಯಮಿಗಳು ಕಂಗಾಲಾಗಿದ್ದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಕುಕ್ಕುಟೋದ್ಯಮಕ್ಕೆ ‘ಕೊರೊನಾ’ ಹೊಡೆತ

ರಾಜ್ಯದ ಪ್ರಮುಖ ವರಮಾನ ಮೂಲಗಳಲ್ಲಿ ಕುಕ್ಕುಟೋದ್ಯಮವೂ ಒಂದು. ಅಂತಹ ಉದ್ಯಮದ ಮೇಲೆ ಕೊರೊನಾ ಕೆಂಗಣ್ಣು ಬೀರಿದ್ದು ವ್ಯಾಪಾರಿಗಳ ನಿದ್ದೆ ಕದ್ದಿದೆ. ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಪ್ರತಿ ಕೆ.ಜಿ. ಕೋಳಿಗೆ 100 ರಿಂದ 130 ರೂಪಾಯಿ ಇತ್ತು. ಆದ್ರೆ, ಕೋಳಿಯಿಂದ ಕೊರೊನಾ ಬರುತ್ತೆ ಅಂತಾ ಯಾರೋ ಹಬ್ಬಿಸಿದ ವದಂತಿಯ ಪರಿಣಾಮ ಸಗಟು ದರ ಕೇವಲ 15 ರೂಪಾಯಿಗೆ ಇಳಿದಿದೆ. ಇದರಿಂದಾಗಿ ದಿನಕ್ಕೆ 10 ಕೆ.ಜಿ. ಮಾರಾಟವೂ ಕಷ್ಟವಾಗಿದೆ ಎಂದು ವ್ಯಾಪಾರಸ್ಥರೊಬ್ಬರು ಅಳಲು ತೋಡಿಕೊಂಡರು.

ABOUT THE AUTHOR

...view details