ಹಾಸನ :ಇಷ್ಟು ದಿನ ಇದ್ದ ಪರಿಸ್ಥಿತಿಯೇ ಬೇರೆ ಈಗಿರುವ ಪರಿಸ್ಥಿತಿ ಬೇರೆ. ಈಗ ನಾವು ಮೂರನೇ ಹಂತಕ್ಕೆ ತಲುಪುತ್ತಿದ್ದೇವೆ. ದಯಮಾಡಿ ಸ್ವತಃ ನೀವು ಅರ್ಥ ಮಾಡಿಕೊಳ್ಳಬೇಕು. ಮನೆಯಿಂದ ಹೊರ ಬರಬಾರದು. ಆಗ ಮಾತ್ರ ಕೊರೊನಾ ಎಂಬ ಮಹಾಮಾರಿ ತೊಲಗಿಸಲು ಸಾಧ್ಯ ಎಂದು ಸಂಸದ ಪ್ರಜ್ವಲ್ ರೇವಣ್ಣ ಜನರಲ್ಲಿ ಮನವಿ ಮಾಡಿದರು.
ಬೇಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊವೀಡ್-19ಗೆ ತೆರೆದಿರುವ ವಿಶೇಷ ತಪಾಸಣಾ ಕೊಠಡಿ, ಐಸೋಲೇಷನ್ ವಾರ್ಡ್ ಹಾಗೂ ನಿರಾಶ್ರಿತರ ಕೇಂದ್ರಗಳನ್ನು ಪರಿಶೀಲಿಸಿದರು. ಬಳಿಕ ಆಸ್ಪತ್ರೆಯ ಸಮೀಪದ ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ, ಅಲ್ಲಿದ್ದ ಕೂಲಿ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ಕೋವಿಡ್-19 ಬಗ್ಗೆ ಅರಿವು ಮೂಡಿಸುವ ಮೂಲಕ ಮನೆಯಿಂದ ಸ್ವಲ್ಪ ದಿವಸ ಯಾರು ಹೊರಬರಬಾರದೆಂದು ಸೂಚಿಸಿದರು.
ಕೊರೊನಾ ಕುರಿತು ಜಾಗೃತಿ ಮೂಡಿಸಲು ಫೀಲ್ಡಿಗಿಳಿದ ಸಂಸದ ಪ್ರಜ್ವಲ್ ರೇವಣ್ಣ..
ಶಾಸಕ ಕೆ ಎಸ್ ಲಿಂಗೇಶ್ ಮಾಹಿತಿ ನೀಡಿ, ಈಗಾಗಲೇ ವಿದೇಶದಿಂದ 28, ಹೊರರಾಜ್ಯಗಳಿಂದ 435, ಹೊರ ಜಿಲ್ಲೆಗಳಿಂದ ಸುಮಾರು 750 ಜನ ಜಿಲ್ಲೆಗೆ ಬಂದಿದ್ದಾರೆ. ಎಲ್ಲರನ್ನೂ ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಸಂಸದರ ನಿರ್ದೇಶನದಂತೆ ಮೂರು ಹಾಸ್ಟೆಲ್ಗಳನ್ನು ಹೋಂ ಕ್ವಾರಂಟೈನ್ ಆಗಿ ನಿರ್ಮಾಣ ಮಾಡಲಾಗಿದೆ.
ಶಾಸಕ ಕೆ ಎಸ್ ಲಿಂಗೇಶ್ ಮಾಹಿತಿ ನೀಡಿ, ಈಗಾಗಲೇ ವಿದೇಶದಿಂದ 28, ಹೊರರಾಜ್ಯಗಳಿಂದ 435, ಹೊರ ಜಿಲ್ಲೆಗಳಿಂದ ಸುಮಾರು 750 ಜನ ಜಿಲ್ಲೆಗೆ ಬಂದಿದ್ದಾರೆ. ಎಲ್ಲರನ್ನೂ ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ. ಸಂಸದರ ನಿರ್ದೇಶನದಂತೆ ಮೂರು ಹಾಸ್ಟೆಲ್ಗಳನ್ನು ಹೋಂ ಕ್ವಾರಂಟೈನ್ ಆಗಿ ನಿರ್ಮಾಣ ಮಾಡಲಾಗಿದೆ. ತಪಾಸಣೆಗೊಳಪಟ್ಟವರನ್ನು ಹಾಸ್ಟೆಲ್‌ನಲ್ಲಿ ನಿಗಾ ಘಟಕದಲ್ಲಿರಿಸಲಾಗಿದೆ. ನಂಜನಗೂಡು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಲೂರು ತಾಲೂಕಿನ ಅರೆಹಳ್ಳಿಯ ವ್ಯಕ್ತಿಯೋರ್ವನನ್ನು ಹೋಂ ಕ್ವಾರೆಂಟೈನ್ನಲ್ಲಿ ಇರಿಸಲಾಗಿದೆ. ಅವನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.