ಕರ್ನಾಟಕ

karnataka

ETV Bharat / state

ಪೊಲೀಸ್​​ ಕಾನ್ಸ್​​ಟೇಬಲ್​ಗೆ ಕೊರೊನಾ ...ಹಾಸನದಲ್ಲಿ ಹೆಚ್ಚಿದ ಕೊರೊನಾ ಆತಂಕ - corona latest news

ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಜಿಲ್ಲೆಯ ಪೊಲೀಸ್ ಕಾನ್ಸ್​​ಟೇಬಲ್​ ಒಂದು ದಿನದ ಹಿಂದೆ ಠಾಣೆಗೆ ಬಂದಿದ್ದರು, ಅವರು ವಾಪಾಸ್​ ಆದಾಗಲೇ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ವರದಿ ಪಾಸಿಟಿವ್ ಬಂದಿದೆ. ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ ಪೊಲೀಸ್ ಠಾಣೆಯನ್ನೇ ಸೀಲ್​ಡೌನ್ ಮಾಡಿದೆ

police constable
ಪೊಲೀಸ್​​ ಕಾನ್ಸ್​​ಟೇಬಲ್​ಗೆ ಕೊರೊನಾ

By

Published : Jun 24, 2020, 6:53 PM IST

ಹಾಸನ :ಬೆಂಗಳೂರು ಪ್ರವಾಸ ಮಾಡಿ ಜಿಲ್ಲೆಗೆ ವಾಪಸ್ ಬಂದು ಕೆಲಸ ನಿರ್ವಹಿಸಿದ್ದ ಪೊಲೀಸ್ ಕಾನ್ಸ್​​ಟೇಬಲ್​​ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಪೊಲೀಸ್ ಠಾಣೆಯನ್ನೇ ಸೀಲ್​ಡೌನ್ ಮಾಡಲಾಗಿದೆ.

ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಜಿಲ್ಲೆಯ ಪೊಲೀಸ್ ಕಾನ್ಸ್​​ಟೇಬಲ್​ ಒಂದು ದಿನದ ಹಿಂದೆ ಠಾಣೆಗೆ ಬಂದಿದ್ದರು, ಅವರು ವಾಪಾಸ್​ ಬಂದ ತಕ್ಷಣ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ವರದಿ ಪಾಸಿಟಿವ್ ಬಂದಿದೆ. ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ ಪೊಲೀಸ್ ಠಾಣೆಯನ್ನೇ ಸೀಲ್​ಡೌನ್ ಮಾಡಿದೆ.

ಪೊಲೀಸ್ ಠಾಣೆಗೆ ಬಂದು ಹೋಗಿರುವ ಜನರಲ್ಲಿ ಕೂಡ ಇದೀಗ ಆತಂಕದ ಹೆಚ್ಚಾಗಿದೆ. ಜೊತೆಗೆ ಪೊಲೀಸ್​ ಕಾನ್ಸ್​ಟೇಬಲ್​​ ಪ್ರವಾಸದ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ.

ಜಿಲ್ಲೆಯಲ್ಲಿ ಇಲ್ಲಿಯವೆರೆ 266 ಜನರಿಗೆ ಸೋಂಕು ಧೃಡಪಟ್ಟಿದ್ದು, ಇವರಲ್ಲಿ 215 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details