ಕರ್ನಾಟಕ

karnataka

ETV Bharat / state

ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು - ಸಚಿವ ಬಿ.ಸಿ.ಪಾಟೀಲ್​​ - ಕೃಷಿ ಸಚಿವ ಬಿ ಸಿ ಪಾಟೀಲ್​

ಜಿಲ್ಲೆಯ ಸಮಸ್ತ ಸ್ಥಿತಿ ಗತಿ ತಿಳಿಯುವ ಉದ್ದೇಶದಿಂದ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಆಗಿರುವ ತೊಂದರೆಗಳ ಬಗ್ಗೆ ಈಗಾಗಲೇ ಚರ್ಚೆ ಮಾಡಿ ಗಮನಸೆಳೆದಿದ್ದಾರೆ.

CORONA: Agriculture activities should be continuous - Minister B.C.Patil
ಕೊರೊನಾ: ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು-ಸಚಿವ ಬಿ.ಸಿ.ಪಾಟೀಲ್​​

By

Published : Apr 10, 2020, 10:29 PM IST

ಹಾಸನ: ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚರ್ಚೆ ಮೂಲಕ ಗಮನಸೆಳೆದಿದ್ದು, ಕೃಷಿಕನು ಮತ್ತು ಜನರು ಬದುಕಬೇಕು ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಜನರಿಗೆ ಭರವಸೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹರಡಿರುವ ಹಿನ್ನಲೆ ದೇಶವೇ ಲಾಕ್​ಡೌನ್ ಆಗಿದೆ.

ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬರಬೇಕು. ಗ್ರಾಹಕರಿಗೆ ಮುಟ್ಟಬೇಕು ಎಂಬ ನಿಟ್ಟಿನಲ್ಲಿ ನಿಬಂಧನೆಗಳನ್ನು ಕೃಷಿ ಇಲಾಖೆಗೆ, ಆರೋಗ್ಯ ಇಲಾಖೆಗೆ ಸಡಿಲಿಸಲು ಸರಕಾರದ ಅದೇಶ ಹೊರಡಿಸಿದೆ. ಇದನ್ನು ಪರಿಶೀಲಿಸಲು ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಆಗಿರುವ ತೊಂದರೆಗಳ ಬಗ್ಗೆ ಈಗಾಗಲೇ ಚರ್ಚೆ ಮಾಡಿ ಗಮನಸೆಳೆದಿದ್ದಾರೆ. ಹಾಸನ ಜಿಲ್ಲೆಗೆ ಸಂಬಂಧಪಟ್ಟಂತೆ ಮುಂಗಾರು ಬಿತ್ತನೆ ಏನಿದೆ ಅವಶ್ಯಕವಾಗಿ ಬೇಕಾಗಿರುವ ಬೀಜ ಮತ್ತು ಗೊಬ್ಬರಗಳ ಸರಬರಾಜು ಮಾಡಲು ಮತ್ತು ಜೀವನ ಸಾಗಿಸುವುದಕ್ಕೆ ಏನು ಮಾಡಬೇಕು ಅದಕ್ಕೆ ಬದ್ದರಾಗಿದ್ದೇವೆ ಎಂದರು. ರೈತರ ಬೆಳೆಗಳಿಗೆ ಈಗಾಗಲೇ ಸರಕಾರ ಘೋಷಣೆ ಮಾಡಿದೆ. ರೈತರ ಬೇಡಿಕೆಗಳಾದ ರಾಗಿಗೆ ಬೆಂಬಲ ಬೆಲೆ ಸಿಕ್ಕಿದ್ದು, ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಆಗಿರುವುದಿಲ್ಲ. ರಾಜ್ಯದ 12 ರಿಂದ 14 ಜಿಲ್ಲೆಗಳಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ.

ಮಾರ್ಕೇಟಿಂಗ್ ಫೆಡರೇಷನ್ ಮತ್ತು ಕೆಎಂಎಫ್ ಇವರನ್ನು ಕರೆದು ಚರ್ಚೆ ಮಾಡಬೇಕೆಂದು ಇತ್ತು. ಆದರೇ ಅಷ್ಟರೊಳಗೆ ಲಾಕ್​​ಡೌನ್ ಘೋಷಣೆಯಾಯಿತು. ರೈತರ ಎಲ್ಲಾ ಬೇಡಿಕೆಗಳನ್ನು ಸರಕಾರದ ಮಟ್ಟಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.

ABOUT THE AUTHOR

...view details