ಹಾಸನ: ರಾಜ್ಯದ ಜನತೆಯ ಹಿತಕ್ಕಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಜೈಲಿಗೆ ಹೋಗಲು ಸಿದ್ಧರಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತ ಪಕ್ಷ ತಪ್ಪು ಮಾಡಿದಾಗ ಪ್ರಶ್ನೆ ಮಾಡುವುದು ವಿರೋಧ ಪಕ್ಷದವರಾದ ನಮ್ಮ ಕರ್ತವ್ಯ. ಅದನ್ನೇ ನಾವು ಮಾಡುತ್ತಿದ್ದೇವೆ. ಆಪರೇಷನ್ ಕಮಲಕ್ಕೆ ಬಿಜೆಪಿ ಹೆಸರುವಾಸಿಯಾಗಿದೆ. ಸರ್ಕಾರ ಅಲುಗಾಡುತ್ತಿರುವುದರಿಂದ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕುವ ಸೂಚನೆ ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಸುರೇಶ್ 20ಕ್ಕೂ ಅಧಿಕ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್ ಅವರು, ರಾಜಕೀಯ ಬೇರೆ ನಮ್ಮ ಅವರು ನಡುವಿನ ವಿಶ್ವಾಸವೇ ಬೇರೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಪಕ್ಷದವರು ನಮ್ಮ ಜೊತೆ ಚೆನ್ನಾಗಿ ಇದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ನಾನು, ಡಿಕೆ ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಮಂಜು ಎಲ್ಲರೂ ಒಗ್ಗಾಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಾರೆ. ಬಿಜೆಪಿಯ ಗೊಡ್ಡು ಬೆದರಿಕೆಗೆ ನಾವು ಎದುರುವುದಿಲ್ಲ ಎಂದು ಪ್ರತ್ಯುತ್ತರ ನೀಡಿದರು.
ಕಾಂಗ್ರೆಸ್ ಕೋವಿಡ್ ವೇಳೆಯಲ್ಲಿ ಮಾನವೀಯತೆಯಿಂದ ಕೆಲಸ ಮಾಡಿದೆ. ನಮ್ಮ ಪಕ್ಷದಿಂದ ಆರೋಗ್ಯ ಹಸ್ತ ಎಂಬ ಕಾರ್ಯಕ್ರಮ ಮಾಡುತ್ತಿದ್ದೇವೆ. 18,000 ಯುವಕರು ಸ್ವಯಂ ಪ್ರೇರಿತವಾಗಿ ಹಳ್ಳಿ- ಹಳ್ಳಿಗಳಿಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮುಂದೆ ಬಂದಿದ್ದಾರೆ. ಆ ಎಲ್ಲಾ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಬಣ್ಣ ಅಂತ ತೋರಿಸಿಕೊಂಡು ಬಣ್ಣ ಹಾಕುತ್ತಾನೆ ಅಂತ ಎಂಎಲ್ಸಿ ಮಾಡಿದ ಯಡಿಯೂರಪ್ಪ ಅವರನ್ನ ಮುಗಿಸಲು ಹೊರಟಿದ್ದ. ನಂಬಿಕೆ ದ್ರೋಹಕ್ಕೆ ಅವರೇ ನಂಬರ್ ಒನ್. ಆತ ಯಾರು, ಈ ಮೊದಲು ಎಲ್ಲಿದ್ದ, ರಾಜಕೀಯಕ್ಕೆ ಹೇಗೆ ಬಂದ ಎಂಬುದನ್ನ ಮತ್ತೊಮ್ಮೆ ಸಮಯ ಸಿಕ್ಕಾಗ ಹೇಳುತ್ತೇನೆ. ಬೆಂಗಳೂರಿನಲ್ಲಿ ಗುಂಪು ಕಟ್ಟಿಕೊಂಡು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹೊರಟಿದ್ದ. ಬೇಕಿದ್ದರೇ ಬೆಂಗಳೂರಿಗೆ ಬಂದು ಕೇಳಿ. ಪಕ್ಷ ಕಟ್ಟುವುದಕ್ಕೆ ಅವಕಾಶ ಕೊಟ್ಟಿದ್ದಾರೆ ಪಕ್ಷ ಸಂಘಟಿಸಲಿ ಎಂದುn ಸಿಪಿ ಯೋಗಿಶ್ವರ್ ಹೆಸರು ಪ್ರಸ್ತಾಪಿಸದೆ ಹರಿಹಾಯ್ದರು.