ಕರ್ನಾಟಕ

karnataka

ETV Bharat / state

'ಪಾಪ ಕೂಪದ ಸರ್ಕಾರ ಕೆಡವಲು ಮಾತ್ರೆ ಸೇವಿಸಿದ್ರಾ..  ಮಿಸ್ಟರ್‌ ಸಂತೋಷ್‌, ಡಿಕೆಶಿ ಎದುರು ನೀವೊಬ್ಬ ಬಚ್ಚಾ..' - ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ

ಡಿಕೆಶಿ ಅವರ ಹೆಸರನ್ನು ಹೇಳಿದ್ರೆ ಪ್ರಚಾರ ಸಿಕ್ಕುತ್ತೆ ಎಂಬ ಕಾರಣಕ್ಕೆ ಅವರ ವಿಚಾರ ಹಿಡಿದು ಮಾತನಾಡುವುದು ಸರಿಯಲ್ಲ. ಬೇನಾಮಿ ಹಣ ತಂದು ಅರಸೀಕೆರೆ ಕ್ಷೇತ್ರದಲ್ಲಿ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಕ್ಷೇತ್ರದ ಜನತೆ ಬುದ್ಧಿವಂತರಿದ್ದಾರೆ..

Banawase Rangaswamy statement
-ಕೂಪದ ಸರ್ಕಾರ ಕೆಡವಲು ಹೋಗಿ ಸಂತೋಷ್ ಮಾತ್ರೆ ಸೇವಿಸಿರಬೇಕು: ಬನವಾಸೆ ರಂಗಸ್ವಾಮಿ

By

Published : Dec 2, 2020, 1:57 PM IST

ಹಾಸನ :ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್​ ಅವರನ್ನು ಯಡಿಯೂರಪ್ಪ ಹೆಸರಿಲ್ಲದೆ ಯಾರೂ ಸಹ ಮೂಸುವುದಿಲ್ಲ. ಅವರು ಡಿ ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಾಗಿರಬೇಕೆಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಎಚ್ಚರಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ತಮ್ಮ ಅಪರಾಧ ಹಾಗೂ ಲೋಪಗಳನ್ನು ಮುಚ್ಚಿಡುವ ಉದ್ದೇಶದಿಂದ ಡಿ ಕೆ ಶಿವಕುಮಾರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.

ಅವರು ಪಾಪ-ಕೂಪದ ಸರ್ಕಾರ ಕೆಡವಲು ಹೋಗಿ ಜಿಗುಪ್ಸೆಗೊಳಗಾಗಿ ಮಾತ್ರೆ ಸೇವಿಸಿರಬೇಕು. ಶಾಸಕರನ್ನು ಖರೀದಿಸಿ ಮಹಾರಾಷ್ಟ್ರಕ್ಕೆ ಕಳುಹಿಸುವ ವೇಳೆಯಿದ್ದ ಚಾಕಚಕ್ಯತೆ ನಿದ್ರೆ ಮಾತ್ರೆ ಸೇವಿಸುವಾಗ ಇರಲಿಲ್ವಾ? ಎಂದು ಪ್ರಶ್ನಿಸಿದರು.

ಪಾಪ ಕೂಪದ ಸರ್ಕಾರ ಕೆಡವಲು ಹೋಗಿ ಸಂತೋಷ್ ಮಾತ್ರೆ ಸೇವಿಸಿರಬೇಕು : ಬನವಾಸೆ ರಂಗಸ್ವಾಮಿ

ಡಿ ಕೆ ಶಿವಕುಮಾರ್​ ಒಬ್ಬ ಪ್ರಬಲ ವ್ಯಕ್ತಿ. ಅವರು ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದ್ದಾರೆ. ಅವರೆದುರು ಸಂತೋಷ್ ಒಬ್ಬ ಬಚ್ಚಾ ಅಷ್ಟೇ.. ಡಿಕೆಶಿ ಅವರ ಹೆಸರನ್ನು ಹೇಳಿದ್ರೆ ಪ್ರಚಾರ ಸಿಕ್ಕುತ್ತೆ ಎಂಬ ಕಾರಣಕ್ಕೆ ಅವರ ವಿಚಾರ ಹಿಡಿದು ಮಾತನಾಡುವುದು ಸರಿಯಲ್ಲ. ಬೇನಾಮಿ ಹಣ ತಂದು ಅರಸೀಕೆರೆ ಕ್ಷೇತ್ರದಲ್ಲಿ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಕ್ಷೇತ್ರದ ಜನತೆ ಬುದ್ಧಿವಂತರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.

ಪ್ರತಿಭಟನೆ ಎಚ್ಚರಿಕೆ :ಹಾಸನದ ಹೊಸ ಬಸ್ ನಿಲ್ದಾಣ ಬಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದರಿಂದ ನಗರದ ಜನತೆಗೆ ತೀವ್ರ ತೊಂದರೆಯಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲವಾದ್ರೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಪಕ್ಷ ಸಂಘಟನೆ ಗುರಿ :ಜಿಲ್ಲೆಯಲ್ಲಿ ಹಿರಿಯ ಮುಖಂಡರ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜವಬ್ದಾರಿಯನ್ನು ಕೆಪಿಸಿಸಿ ಮುಖಂಡರು ನೀಡಿದ್ದಾರೆ. ಅಂತೆಯೇ ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಬಲವರ್ಧನೆಯೊಟ್ಟಿಗೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಹೆಚ್ಚು ಸ್ಥಾನಗಳನ್ನು ಪಡೆಯಲು ಶ್ರಮಿಸಲಾಗುವುದು ಎಂದರು.

ABOUT THE AUTHOR

...view details