ಹಾಸನ: ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಗೊಂದಲಗಳನ್ನು ಬದಿಗೊತ್ತಿ, ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು
ಕಾಂಗ್ರೆಸ್ ಮುಖಂಡ ಎಸ್.ಎಂ.ಆನಂದ್ ಮನವಿ ಮಾಡಿದ್ದಾರೆ.
ರಾಹುಲ್ ಪ್ರಧಾನಿಯಾಗಿಸಲು ವೈಮನಸ್ಸು ಬಿಟ್ಟುಬಿಡಿ... ಕಾರ್ಯಕರ್ತರಿಗೆ ಕೈ ನಾಯಕನ ಕಿವಿಮಾತು - press Meet
ಗೊಂದಲಗಳನ್ನು ಬದಿಗೊತ್ತಿ, ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕರಿಸಲು ಕಾಂಗ್ರೆಸ್ ಮುಖಂಡ ಎಸ್.ಎಂ.ಆನಂದ್ ಮೈತ್ರಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಮಾತು ಪಾಲಿಸುವುದು ನಮ್ಮ ಕರ್ತವ್ಯ ಎಂದು ಎಚ್ಚರಿಸಿದ್ದಾರೆ.
![ರಾಹುಲ್ ಪ್ರಧಾನಿಯಾಗಿಸಲು ವೈಮನಸ್ಸು ಬಿಟ್ಟುಬಿಡಿ... ಕಾರ್ಯಕರ್ತರಿಗೆ ಕೈ ನಾಯಕನ ಕಿವಿಮಾತು](https://etvbharatimages.akamaized.net/etvbharat/images/768-512-2937139-thumbnail-3x2-hsn.jpg)
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆಯಂತೆ ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಹಾಗೂ ದೇಶದ ಅಭಿವೃದ್ಧಿ ಉದ್ದೇಶದಿಂದ ಮೈತ್ರಿ ಹೊಂದಾಣಿಕೆಗೆ ಶ್ರಮಿಸಬೇಕಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 22 ಕ್ಷೇತ್ರಗಳನ್ನು ಗೆಲ್ಲಬೇಕು. ಈಗಾಗಲೇ ಎರಡೂ ಪಕ್ಷದ ಕಾರ್ಯಕರ್ತರ ನಡುವಿನ ಗೊಂದಲಗಳನ್ನು ನಿವಾರಿಸಿದ್ದೇವೆ. ಎಲ್ಲ ತಾಲೂಕುಗಳಲ್ಲೂ ಉತ್ತಮ ವಾತಾವರಣವಿದೆ ಎಂದು ಅವರು ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಮಾಹಿತಿ ಪಡೆದು ಕಠಿಣ ಕ್ರಮ ತೆಗದುಕೊಳ್ಳುತ್ತೇವೆ. ಕಾರ್ಯಕರ್ತರ ನೋವುಗಳನ್ನು ಸಹಿಸಿಕೊಂಡು ಹೋಗುವುದು ನಮಗೂ ಕಷ್ಟ. ರಾಹುಲ್ ಗಾಂಧಿ ಅವರು ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು, ಅದನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಕಾರ್ಯಕರ್ತರಿಗೆ ಆನಂದ ಇದೇ ವೇಳೆ ಎಚ್ಚರಿಕೆ ನೀಡಿದರು.
TAGGED:
press Meet