ಕರ್ನಾಟಕ

karnataka

ETV Bharat / state

'ಬಿಜೆಪಿ ಸರ್ಕಾರದ ತಪ್ಪುಗಳಿಂದ ರೈತರು ಬಲಿ ಆಗುತ್ತಿದ್ದಾರೆ'

ಸಾಲ ಮನ್ನಾ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಸರಬರಾಜು, ಉತ್ತಮ ಗುಣಮಟ್ಟದ ಬೀಜ ವಿತರಣೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದೆ ಬಿಜೆಪಿ ಸರ್ಕಾರವು ಒಂದರ ಮೇಲೊಂದು ತಪ್ಪುಗಳನ್ನು ಮಾಡುವ ಮೂಲಕ ರೈತರನ್ನು ಮಣ್ಣಿನಲ್ಲಿ ಹೂಳುವ ಯೋಜನೆ ಹಾಕಿಕೊಂಡಂತೆ ಕಾಣುತ್ತದೆ ಎಂದು ಕಾಂಗ್ರೆಸ್ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು.

Congress leader allegation on BJP govt
ಕಾಂಗ್ರೆಸ್ ಮುಖಂಡ ದೇವರಾಜೇಗೌಡ

By

Published : Aug 12, 2020, 5:51 PM IST

ಹಾಸನ: ಕೊರೊನಾ ರೋಗ ತಡೆಗಟ್ಟುವ ವಿಚಾರವಾಗಿ ಬಿಜೆಪಿ ಸರ್ಕಾರ ಒಂದು ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ದೇವರಾಜೇಗೌಡ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯಡಿಯೂರಪ್ಪರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ 12 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಹತ್ತಾರು ರೀತಿಯ ವೈರುಧ್ಯದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ ಬಡವರು ಮತ್ತು ಹಿಂದುಳಿದ ವರ್ಗಗಳ ಪರ ಘೋಷಣೆ ಮಾಡಿದ ಕೋಟಿಗಟ್ಟಲೆ ಪರಿಹಾರದ ಹಣವು ಈವರೆಗೆ ಯಾರಿಗೂ ತಲುಪಿಲ್ಲ. ಕರ್ನಾಟಕ ಭೂ-ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಈಗಾಗಲೇ ಕೃಷಿ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಮಾಡಿದ ಬೆನ್ನ ಹಿಂದೆಯೇ ಇದನ್ನೂ ಮಾಡಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಹಲವಾರು ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ಉಳ್ಳವರ ಪರ ಎಂಬುದನ್ನು ಸಾಬೀತು ಪಡಿಸಿವೆ. ಸಾಲ ಮನ್ನಾ, ಸಬ್ಸಿಡಿ ದರದಲ್ಲಿ ರಸಗೊಬ್ಬರ ಸರಬರಾಜು, ಉತ್ತಮ ಗುಣಮಟ್ಟದ ಬೀಜ ವಿತರಣೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಇದ್ಯಾವುದನ್ನು ಮಾಡದೇ ಬಿಜೆಪಿ ಸರ್ಕಾರವು ಒಂದರ ಮೇಲೊಂದು ತಪ್ಪುಗಳನ್ನು ಮಾಡುವ ಮೂಲಕ ರೈತರನ್ನು ಮಣ್ಣಿನಲ್ಲಿ ಹೂಳುವ ಯೋಜನೆ ಹಾಕಿಕೊಂಡಂತೆ ಕಾಣುತ್ತದೆ ಎಂದು ದೂರಿದರು.

ಜಿಲ್ಲೆಯಲ್ಲಿ ಬೆಳೆದಿದ್ದ ಆಲೂಗಡ್ಡೆ ಬೆಳೆ ಹಾಳಾಗಿದೆ. ಇದರ ಜೊತೆ-ಜೊತೆಗೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಧಿಕ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಜೋಳದ ಬೆಳೆ ಕೂಡ ಸಂಪೂರ್ಣವಾಗಿ ನೆಲ ಕಚ್ಚಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಅನ್ಯಾಯ ಮಾಡದೇ ಆಲೂಗಡ್ಡೆ ಮತ್ತು ಜೋಳದ ಬೆಳೆಯ ನಷ್ಟವನ್ನು ಗಣನೆಗೆ ತೆಗೆದುಕೊಂಡು 1 ಎಕರೆಗೆ ಕನಿಷ್ಠ . 50000 ರೂ. ಪರಿಹಾರವನ್ನು ತಕ್ಷಣ ನೀಡಬೇಕೆಂದು ಒತ್ತಾಯಿಸಿದರು.

ABOUT THE AUTHOR

...view details