ಕರ್ನಾಟಕ

karnataka

ETV Bharat / state

ಸಿಎಂ ಇಬ್ರಾಹಿಂ ಹೇಳಿಕೆ ಹಿಂದೆ ಕಾಂಗ್ರೆಸ್ ಕುತಂತ್ರ: ಹೆಚ್.​ಡಿ. ರೇವಣ್ಣ

''ಸಿಎಂ ಇಬ್ರಾಹಿಂ ಮಾತನಾಡಿರುವುದರ ಹಿಂದೆ ಕಾಂಗ್ರೆಸ್​ ಕುತಂತ್ರವಿದೆ. ಇಬ್ರಾಹಿಂ ಕಾಂಗ್ರೆಸ್​​ಗೆ ಹೋಗುವುದಾದರೆ ಹೋಗಲಿ. ಸಂತೋಷ, ನಮ್ಮದೇನು ಅಭ್ಯಂತರವಿಲ್ಲ'' ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಕಿಡಿಕಾರಿದರು.

HD Revanna
ಸಿಎಂ ಇಬ್ರಾಹಿಂ ಹೇಳಿಕೆ ಹಿಂದೆ ಕಾಂಗ್ರೆಸ್ ಕುತಂತ್ರ: ಹೆಚ್.​ಡಿ. ರೇವಣ್ಣ

By ETV Bharat Karnataka Team

Published : Oct 18, 2023, 2:44 PM IST

ಸಿಎಂ ಇಬ್ರಾಹಿಂ ಹೇಳಿಕೆ ಹಿಂದೆ ಕಾಂಗ್ರೆಸ್ ಕುತಂತ್ರ: ಹೆಚ್.​ಡಿ. ರೇವಣ್ಣ

ಹಾಸನ:''ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ. ಅವರು ರಾಷ್ಟ್ರೀಯ ಅಧ್ಯಕ್ಷರಿದ್ದಾರೆ, ಹೀಗಾಗಿ ಅವರು ತೀರ್ಮಾನ ಮಾಡುತ್ತಾರೆ. ಸಿಎಂ ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಹೋಗಲಿ. ಸಂತೋಷ, ನಮ್ಮದೇನು ಅಭ್ಯಂತರವಿಲ್ಲ'' ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಹೇಳಿದರು.

ಹಾಸನದ ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ''ಸಿಎಂ ಇಬ್ರಾಹಿಂ ಮಾತನಾಡಿರುವುದರ ಹಿಂದೆ ಕಾಂಗ್ರೆಸ್​ ಕುತಂತ್ರವಿದೆ'' ಎಂದ ಅವರು, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡುವುದಾಗಿ ಪಕ್ಷ ತೀರ್ಮಾನಿಸಿದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದರು.

''ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ, ಬೇಸರಗೊಂಡ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಮ್ಮ ಬೆಂಬಲಿಗರ ಮತ್ತು ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ, ಸಭೆಯಲ್ಲಿ ನಮ್ಮದೆ ಓರಿಜಿನಲ್​ ಜೆಡಿಎಸ್​​ ಹೆಂಗಿದ್ದಾರೆ ಅದನ್ನು ಮಾಜಿ ಪ್ರಧಾನಿ ದೇವೇಗೌಡರೇ ಕೂತು ಬಗೆಹರಿಸುತ್ತಾರೆ. ಇಂತಹ ಮಾತಿಗೆಲ್ಲ ತಲೆಕೆಡಿಸಿಕೊಳ್ಳುವುದು ಬೇಡ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಯಾರನ್ನು ಉಚ್ಛಾಟನೆ ಮಾಡ್ತಾರೆ, ಏನು ತೀರ್ಮಾನ ಮಾಡುತ್ತಾರೆ ನೋಡೋಣ'' ಎಂದು ಗುಡುಗಿದರು.

''ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ. ಅವರು ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಹೀಗಾಗಿ ಅವರು ತೀರ್ಮಾನ ಮಾಡುತ್ತಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಸಂತೋಷ, ನಮ್ಮದೇನು ಅಭ್ಯಂತರವಿಲ್ಲ. ಜೆಡಿಎಸ್ ಇಬ್ಭಾಗ ಆಗಲ್ಲ, 19 ಜನ ಎಂಎಲ್‌ಎಗಳು ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಈ ಪಾರ್ಟಿಗಾಗಿ ಏನೇನು ಮಾಡಿದ್ದಾರೆ ಅಂತ ಜನರಿಗೆ ಗೊತ್ತಿದೆ. ಅವರ ಮಾತಿಗೆಲ್ಲ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ಆ ಸಭೆಯಲ್ಲಿ ಯಾರು ಕುಳಿತಿದ್ದಾರೆ ನೋಡಿದ್ರಾ? ಜೆ.ಹೆಚ್. ಪಟೇಲ್ ಮಗನನ್ನು ಕೂರಿಸಿಕೊಂಡು ಸಭೆ ಮಾಡಿದ್ದಾರೆ. ದೇವೇಗೌಡರನ್ನು 60 ವರ್ಷ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುವುದು ಗೊತ್ತಿದೆ. ಕುಮಾರಸ್ವಾಮಿ ಮಗನನ್ನು ಸೋಲಿಸಿದವರು ಯಾರು?'' ಎಂದು ಪ್ರಶ್ನಿಸಿದರು.

''ಅಂತಹ ಕಾಂಗ್ರೆಸ್‌ಗೆ ಹೋಗಿ ಬೀಳುತ್ತೀರಾ? ಆದ್ರೆ, ನಮಗೇನು ಅಭ್ಯಂತರ ಇಲ್ಲ. ಕಾಂಗ್ರೆಸ್​ ಅನ್ನು ಇಬ್ರಾಹಿಂ ಮುಗಿಸಿ ಆಯ್ತು. ಈಗ ನಮ್ಮ ಹತ್ತಿರ ಬಂದಿದ್ದಾರೆ. ಇವತ್ತು ಒರಿಜಿನಲ್ ಕಾಂಗ್ರೆಸ್ ಇಲ್ಲ. ನೆಹರು, ಗಾಂಧಿ ಕಾಲದ ಕಾಂಗ್ರೆಸ್ ಈಗ ಇಲ್ಲ. ಇಂತಹ ಕಾಂಗ್ರೆಸ್‌ಗೆ ಹೆದರುವುದಾದರೆ ಮನೆ ಸೇರಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್‌ನ ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ. ಸ್ವಲ್ಪ ದಿನ ತಡೆಯಿರಿ ಕಾಲವೇ ನಿರ್ಧರಿಸುತ್ತೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಸತೀಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​ ಸ್ವಾಗತಕ್ಕೆ ಗೈರು ವಿಚಾರ.. ಡಿಸಿಎಂ ಡಿಕೆಶಿ ಹೇಳಿದ್ದೇನು..?

ABOUT THE AUTHOR

...view details