ಹಾಸನ :ಅಂಬೇಡ್ಕರ್ ಅವರ ಕನಸಿನ ಮನೆಯ ಕಿಟಿಕಿಗಳನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು.
ಡಾ. ಬಿ ಆರ್ ಅಂಬೇಡ್ಕರ್ ಅವರ ಮನೆ ಕಿಟಕಿ ಧ್ವಂಸ ಖಂಡಿಸಿ ಪ್ರತಿಭಟನೆ - ರಾಜಾಗೃಹದ ಕಿಟಕಿಗಳು
ಮುಂಬೈನ ದಾದರ್ನಲ್ಲಿರುವ ರಾಜಗೃಹ ಒಂದು ಪವಿತ್ರ ಸ್ಥಳ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇಂದ್ರ ಗ್ರಂಥಾಲಯಕ್ಕಾಗಿ ನಿರ್ಮಿಸಿದ ಏಕೈಕ ಕಟ್ಟಡ. ಈ ಐತಿಹಾಸಿಕವಾದ ಮಹತ್ವದ ಮತ್ತು ಪವಿತ್ರವಾದ ರಾಜಗೃಹದ ಮೇಲಿನ ದಾಳಿ ಅತ್ಯಂತ ಅಘಾತಕಾರಿಯಾದ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

ಮುಂಬೈ ನಗರದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಕನಸಿನ ಮನೆಯ ರಾಜಾಗೃಹದ ಕಿಟಕಿಗಳು ಮತ್ತು ಮನೆಯ ಮುಂದಿನ ಪಾಟ್ಗಳನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಿ ಸಮಗ್ರ ತನಿಖೆ ನಡೆಸಬೇಕು. ಮುಂಬೈನ ದಾದರ್ನಲ್ಲಿರುವ ರಾಜಗೃಹ ಒಂದು ಪವಿತ್ರ ಸ್ಥಳ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇಂದ್ರ ಗ್ರಂಥಾಲಯಕ್ಕಾಗಿ ನಿರ್ಮಿಸಿದ ಏಕೈಕ ಕಟ್ಟಡ. ಈ ಐತಿಹಾಸಿಕವಾದ ಮಹತ್ವದ ಮತ್ತು ಪವಿತ್ರವಾದ ರಾಜಗೃಹದ ಮೇಲಿನ ದಾಳಿ ಅತ್ಯಂತ ಅಘಾತಕಾರಿಯಾದ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದಾಳಿಯ ಹಿಂದೆ ಯಾರದೋ ರಾಜಕೀಯ ಕೈವಾಡ ಇರಬಹುದು. ಇದನ್ನು ಕಂಡು ಹಿಡಿಯಲು ದಾಳಿ ಮಾಡಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳಿಗೆ ಅಧಿಕಾರ ನೀಡಿ ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.