ಹಾಸನ: ಸಾರ್ವಜನಿಕ ಸ್ಥಳದಲ್ಲಿ ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದನ್ನು ಪ್ರಶ್ನಿಸಿ ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು ತಾಲೂಕಿನ ರುದ್ರಪಟ್ಟಣ ಸಮೀಪ ನಡೆದಿದೆ.
ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಗ್ರಾಮದ ಪರಿಶಿಷ್ಟ ಸಮುದಾಯದ ಚಂದ್ರ ಹಾಗೂ ಅವರ ಮಗ ನಿತಿನ್ ಹಲ್ಲೆಗೊಳಗಾದ ವ್ಯಕ್ತಿಗಳು. ಗಂಗೂರಿನ ಹ್ಯಾಂಡ್ ಪೋಸ್ಟ್‌ನಲ್ಲಿ ಅಂದರೆ ರಾಮನಾಥಪುರ- ಬೆಟ್ಟದಪುರ ರಸ್ತೆಯ ಪಕ್ಕದಲ್ಲಿ ಕಬ್ಬಿನ ಹಾಲಿನ ಗಾಡಿಯನ್ನು ಇಟ್ಟುಕೊಂಡು ಸುಮಾರು ಆರು ತಿಂಗಳಿಂದ ಜೀವನ ಸಾಗಿಸುತ್ತಿದ್ದರು.
ಫೆ. 27ರಂದು ಗಂಗೂರಿನ ನಿವಾಸಿ ಸುನಿಲ್ ಎಂಬಾತ ನನ್ನ ಬಳಿ ಬಂದು ಕೂಡಲೇ ಗಾಡಿ ತೆಗೆಯಬೇಕೆಂದು ಹೇಳಿ, ಜಾತಿ ನಿಂದನೆ ಮಾಡಿ ಎಂದು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಇದೀಗ ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.